ಸಾಂಬ್ರಾ: ಬೆಳಗಾವಿ ಶಾಸ್ತ್ರೀನಗರದ 9ನೇ ಕ್ರಾಸ್ ಚರಂಡಿಯಲ್ಲಿ ಬೃಹತ್ ಹೆಬ್ಟಾವು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಶುಕ್ರವಾರ ರಾತ್ತಿ ಬೃಹತ್ ಹೆಬ್ಟಾವು ಕಾಣಿಸಿಕೊಂಡಿದ್ದು, ಜನರು ಭಯಭೀತರಾಗಿದ್ದಾರೆ. ಶಾಸ್ತ್ರೀನಗರದ 9ನೇ ಕ್ರಾಸ್ ಬಳಿ ಚರಂಡಿಗೆ ಹೋಗುತ್ತಿದ್ದಾಗ ಜನರಿಗೆ ಕಾಣಿಸಿಕೊಂಡಿದೆ. ಹೆಬ್ಟಾವಿನ ದೃಶ್ಯಾವಳಿಯನ್ನು ಜನ ಮೊಬೈಲ್‌ಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣ ಹರಿ ಬಿಟ್ಟಿದ್ದಾರೆ. ಬಳಿಕ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜನರು ಮಾಹಿತಿ ನೀಡಿದ್ದಾರೆ.
ಚರಂಡಿಯಲ್ಲಿ ಇಷ್ಟೊಂದು ಬೃಹತ್ ಗಾತ್ರದ ಹೆಬ್ಟಾವು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ.
Laxmi News 24×7