Breaking News

ಕ್ಯಾನ್ಸರ್ ಬಂದು ಸಾಯುವ ಮುಂಚೆ ಬರೆದ ಪತ್ರ…! “ಮರಣಕ್ಕಿಂತ ದೊಡ್ಡ ಸತ್ಯವೊಂದಿಲ್ಲ”…!!

Spread the love

ವಿಶ್ವ ವಿಖ್ಯಾತ ಫ್ಯಾಶನ್ ಡಿಸೈನರ್ ಮತ್ತು ಬರಹಗಾರ್ತಿಯಾದ ಕಿರ್ಸಿಡಾ ರೋಡ್ರಿಗಸ್ ಕ್ಯಾನ್ಸರ್ ಬಂದು ಸಾಯುವ ಮುಂಚೆ ಬರೆದ ಪತ್ರ…!

1) ವಿಶ್ವದಲ್ಲಿನ ಐಷಾರಾಮಿ ಕಾರುಗಳು ನನ್ನ ಮನೆಯಲ್ಲಿದೆ ಆದರೆ ನನ್ನ ಯಾತ್ರೆ ಮಾತ್ರ ವೀಲ್ ಚೈಯರ್’ನಲ್ಲಾಗಿದೆ..!

2) ನನ್ನ ಮನೆಯಲ್ಲಿ ಎಲ್ಲಾ ರೀತಿಯ ಬಟ್ಟೆಬರೆಗಳು ಮತ್ತು ಚಪ್ಪಲಿಗಳು ತುಂಬಿಕೊಂಡಿದೆ ಆದರೆ ಆಸ್ಪತ್ರೆಯಲ್ಲಿ ಸಣ್ಣ ತುಂಡು ವಸ್ತ್ರದೊಂದಿಗೆ ನನ್ನ ಶರೀರ ಸುತ್ತಿ ಮಲಗಿಸಿದ್ದಾರೆ..!

3) ಬ್ಯಾಂಕ್’ನಲ್ಲಿ ಅಗತ್ಯವಿರುವಷ್ಟು ಹಣವಿದೆ ಆದರೆ ನನಗೆ ಪ್ರಯೋಜನ ಬರುತ್ತಿಲ್ಲ..!

4) ನನ್ನ ಮನೆ ಎಂಬುದು ಅರಮನೆಯಂತಿದೆ ಆದರೆ ನಾನು ಆಸ್ಪತ್ರೆಯ ಸಣ್ಣ ಕಬ್ಬಿಣದ ಮಂಚದಲ್ಲಿ ಮಲಗಿದ್ದೇನೆ..!

5) ಒಂದು 5 star ಹೋಟೆಲ್’ನಿಂದ ಇನ್ನೊಂದು 5’star ಹೋಟೆಲ್’ಗೆ ನಾನು ಯಾತ್ರೆ ಮಾಡುತ್ತಿದ್ದೆ, ಆದರೆ ಈಗ ಒಂದು ಲ್ಯಾಬ್’ನಿಂದ ಇನ್ನೊಂದು ಲ್ಯಾಬ್’ಗೆ ಮಾತ್ರ ನನ್ನ ಯಾತ್ರೆ..!

6) ನಾನು ನೂರಕ್ಕಿಂತ ಹೆಚ್ಚು ಜನರಿಗೆ ಆಟೋಗ್ರಾಫ್ ನೀಡುತ್ತಿದ್ದೆ, ಈಗ ನನ್ನ ಆಟೋಗ್ರಾಫ್ ಡಾಕ್ಟರ್ ಬರಹ ಮಾತ್ರ..!

7) ನನ್ನ ತಲೆ ಕೂದಲು ಅಲಂಕಾರ ಮಾಡಲು ಏಳು ಜನ ಬ್ಯೂಟಿಷಿಯನ್ ಇದ್ದರು, ಆದರೆ ಈಗ ನನ್ನ ತಲೆಯಲ್ಲಿ ಒಂದೇ ಒಂದು ಕೂದಲಿಲ್ಲ..!

 ನನಗೆ ಅಗತ್ಯವಿರುವಲ್ಲಿಗೆ ಸ್ವಂತ ‘ಜೆಟ್ ವಿಮಾನ’ದಲ್ಲಿ ಬೇಕೆಂದಾಗ ಹೋಗಿ ಬರುತ್ತಿದ್ದೆ, ಆದರೆ ಈಗ ಆಸ್ಪತ್ರೆಯ ವೆರಾಂಡಕ್ಕೆ ಬರಬೇಕಾದರೆ ಇಬ್ಬರು ಸ್ಟಾಫ್ ನರ್ಸ’ಗಳ ಸಹಾಯದ ಅಗತ್ಯವಿದೆ..!

 ಮನೆಯಲ್ಲಿ ನಾನಾಬಗೆಯ ಭಕ್ಷ್ಯ ಭೋಜನ ವ್ಯವಸ್ಥೆಯಿದೆ ಆದರೆ ಈಗ ನನ್ನ ಆಹಾರ ಕ್ರಮ ಎರಡು ಮಾತ್ರೆ ಮತ್ತು ಉಪ್ಪು ನೀರು ಮಾತ್ರ..!

ಈ ಮನೆ, ಕಾರು, ಜೆಟ್ ವಿಮಾನ, ಹಲವಾರು ಬ್ಯಾಂಕ್ ಅಕೌಂಟ್, ದೊಡ್ಡ ಸ್ಥಾನಮಾನ, ಪ್ರಶಸ್ತಿ ಇದು ಯಾವುದು ನನಗೆ ಪ್ರಯೋಜನವಿಲ್ಲ, ಸಮಾಧಾನಕರವೂ ಅಲ್ಲ, ಸಮಾಧಾನ ನೀಡುತ್ತಿರೂವುದು ಜನರ ಮುಖ ಮತ್ತು ಅವರ ಸ್ಪರ್ಶಗಳು ಮಾತ್ರ…
“ಮರಣಕ್ಕಿಂತ ದೊಡ್ಡ ಸತ್ಯವೊಂದಿಲ್ಲ”…!!


Spread the love

About Laxminews 24x7

Check Also

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಫ್ಯಾಷನ್‌ ಶೋ”

Spread the love    ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೀಸನ್ಸ್‌ ಆಫ್‌ ಸ್ಮೈಲ್‌ನ ಭಾಗವಾಗಿ ಇದೇ ಮೊದಲ ಬಾರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ