Breaking News

ಸೈಬರ್ ವಂಚನೆ: ಬಸವಕಲ್ಯಾಣದ ಯುವ ಉಪನ್ಯಾಸಕಿ ಆತ್ಮಹತ್ಯೆ

Spread the love

ಸವಕಲ್ಯಾಣ: ತಾಲ್ಲೂಕಿನ ಇಸ್ಲಾಂಪುರದ ಆರತಿ ಕನಾಟೆ (28) ಎಂಬುವರು ಆನ್‌ಲೈನ್‌ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಹಣದ ವ್ಯವಹಾರ ನಡೆಸಿ, ವಂಚನೆಗೆ ಒಳಗಾಗಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‌‌’ನಗರದ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಆರತಿ ಅವರು ಆನ್‌ಲೈನ್ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಹಣ ಹೂಡಿಕೆ ಮಾಡಿದ್ದಾರೆ.

ಮನೆಯಲ್ಲೇ ಕೂತು ಉದ್ಯೋಗ ಮಾಡಲು ಹಣ ಹೂಡಿಕೆ ಮಾಡಿ ಎಂದ ಕಾರಣ ಅವರು ₹ 1 ಸಾವಿರದಿಂದ ₹2.50 ಲಕ್ಷದವರೆಗೆ ಆನ್‌ಲೈನ್ ಮೂಲಕ ಹಣ ಕಳುಹಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ನಂತರ ಅವರಿಗೆ ಇನ್ನೂ ₹82 ಸಾವಿರ ಕಳುಹಿಸಿದರೆ ಎಲ್ಲ ಹಣ ಹಿಂದಿರುಗಿಸಲಾಗುವುದು ಎಂಬ ಸಂದೇಶ ಬಂತಾದರೂ ಅವರಿಗೆ ಅಷ್ಟು ಹಣ ಹೊಂದಿಸಲು ಆಗಲಿಲ್ಲ. ವಂಚನೆಗೆ ಒಳಗಾದ ಮತ್ತು ಕುಟುಂಬದ ಗಮನಕ್ಕೆ ತಾರದೇ ಲಕ್ಷಾಂತರ ರೂಪಾಯಿ ಕಳೆದುಕೊಂಡ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಆತ್ಮಹತ್ಯೆಗೂ ಮುನ್ನ ಮನೆಯಲ್ಲಿ ಚಿನ್ನಾಭರಣ ತೆಗೆದಿಟ್ಟು, ಹಣ ಹೂಡಿಕೆ ಮಾಡಿದ ಏಜೆನ್ಸಿಯ ಹೆಸರಿರುವ ಚೀಟಿಯನ್ನು ಬರೆದಿದ್ದಾರೆ. ಚೀಟಿ ಸಿಕ್ಕ ಕೂಡಲೇ ತಂದೆ ಶಿವರಾಜ ಕನಾಟೆ ಅವರು ಬಾವಿ ಪರಿಶೀಲಿಸಿದಾಗ, ಶವ ಪತ್ತೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love

About Laxminews 24x7

Check Also

ಕಿರಾವಾಳೆಯ ಗೋರಕ್ಷನಾಥ ಮಠದಲ್ಲಿ ಕಳ್ಳತನ

Spread the love ಕಿರಾವಾಳೆಯ ಗೋರಕ್ಷನಾಥ ಮಠದಲ್ಲಿ ಕಳ್ಳತನ ಖಾನಾಪೂರ ತಾಲೂಕಿನ ಗುಂಜಿ ಬಳಿಯಿರುವ ಕಿರಾವಾಳೆಯ ಪ್ರಸಿದ್ಧ ಗೋರಕ್ಷನಾಥ ಮಠದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ