Breaking News

ತಿರುಪತಿ ದೇವಸ್ಥಾನ: ಲಡ್ಡು ಪ್ರಸಾದದ ತೂಕದಲ್ಲಿ ಯಾವುದೇ ಅನುಮಾನ ಬೇಡ : ಟಿಟಿಡಿ ಸ್ಪಷ್ಟನೆ

Spread the love

ಹೈದರಾಬಾದ್‌:ತಿರುಪತಿಯ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದದ ಗಾತ್ರ ಮತ್ತು ತೂಕದಲ್ಲಿ ಬದಲಾವಣೆಯಾಗಿದೆ ಎಂಬ ಆರೋಪವನ್ನು ಟಿಟಿಡಿ(ತಿರುಮಲ ತಿರುಪತಿ ದೇವಸ್ಥಾನಮ್ಸ್‌) ತಳ್ಳಿಹಾಕಿದೆ.

ಅಲ್ಲದೇ, ಸುಳ್ಳು ಸುದ್ದಿಯನ್ನು ಯಾವುದೇ ಕಾರಣಕ್ಕೂ ನಂಬದಿರಿ ಎಂದು ಭಕ್ತಾದಿಗಳಿಗೆ ಮನವಿ ಮಾಡಿದೆ.

ದೇಗುಲದ ಅಡುಗೆ ಮನೆ “ಪೋಟು’ವಿನಲ್ಲಿ ಪ್ರತಿದಿನ ತಯಾರಾಗುವ ಲಡ್ಡುಗಳನ್ನು ಪ್ರತ್ಯೇಕ ಟ್ರೇಯಲ್ಲಿ ಇಟ್ಟು, ಅದರ ತೂಕವನ್ನು ಅಳೆಯಲಾಗುತ್ತದೆ. ಇಲ್ಲಿನ ಎಲ್ಲ ಪ್ರಕ್ರಿಯೆಯೂ ಪಾರದರ್ಶಕವಾಗಿದೆ.

ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದು ಟಿಟಿಡಿ ಹೇಳಿದೆ.

ಶ್ರೀವರಿ ಲಡ್ಡು ಪ್ರಸಾದದ ತೂಕವು ನಿಗದಿಗಿಂತ ಕಡಿಮೆಯಿದೆ ಎಂಬ ವಿಡಿಯೋವೊಂದು ಹರಿದಾಡಿದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.


Spread the love

About Laxminews 24x7

Check Also

ಬಾಳೆ ತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿ ಸೆರೆ

Spread the loveಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಸಮೀಪದ ಮುಕ್ತಿ ಕಾಲೊನಿಯ ಬಾಳೆ ತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿಯನ್ನು ಬಂಡೀಪುರ ಅರಣ್ಯ ಸಿಬ್ಬಂದಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ