ನನ್ನ ಪಕ್ಷಕ್ಕೆ ಡ್ಯಾಮೆಜ್ ಆಗುವುದನ್ನ ತಡೆಯಲು ನನ್ನ ಹೇಳಿಕೆ ವಾಪಸ್ ಪಡೆದಿರುವೆ. ನನಗೆ ಎಲ್ಲಕ್ಕಿಂತ ಪಕ್ಷ ದೊಡ್ಡದು ಹೀಗಾಗಿ ಪಕ್ಷಕ್ಕೆ ಡ್ಯಾಮೆಜ್ ಆಗಬಾರದೆಂದು ಆ ಪದ ವಾಪಸ್ ಪಡೆದಿರುವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಹಿಂದು ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ನಿನ್ನೆಯμÉ್ಟೀ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿ ಸತೀಶ್ ಜಾರಕಿಹೊಳಿ ವಿμÁದ ವ್ಯಕ್ತಪಡಿಸಿದ್ದರು. ಇಂದು ಗುರುವಾರ ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಗಣೇಶ ಹುಕ್ಕೇರಿ ಸೇರಿ ಜಿಲ್ಲೆಯ ಮುಖಂಡರೊಂದಿಗೆ ಮಹತ್ವದ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಸತೀಶ ಜಾರಕಿಹೊಳಿ ನಿನ್ನೆ ನಾನು ಹೇಳಿದ ಮಾತು ವಾಪಸ್ ಪಡೆಯಲು ಒತ್ತಡ ಇತ್ತು. ಬೇರೆ ಬೇರೆ ಕಾರಣದಿಂದ ಒತ್ತಡ ಇತ್ತು. ನನ್ನ ಹೇಳಿಕೆಯನ್ನ ವಾಪಸ್ ಪಡೆದಿರುವೆ. ನಿನ್ನೆ ಜಿಲ್ಲೆಯ ಎಲ್ಲಾ ನಾಯಕರೊಂದಿಗೆ ಚರ್ಚೆ ನಡೆಸಿ ವಾಪಸ್ ಪಡೆದಿರುವೆ. ನೈಜ ಸುದ್ದಿ ಬಿಟ್ಟು ಬೇರೆ ಬೇರೆ ಆಯಾಮದಲ್ಲಿ ಚರ್ಚೆ ಆರಂಭ ಆಯ್ತು. ವೈಯಕ್ತಿಕವಾಗಿ, ಪಕ್ಷಕ್ಕೆ ಡ್ಯಾಮೆಜ್ ಆಯಿತು. ಬೇರೆ ನಾಯಕರು ಸಮರ್ಥನೆ ಮಾಡುವ ಪ್ರಶ್ನೆ ಇಲ್ಲ. ಅದು ಖಾಸಗಿ ಕಾರ್ಯಕ್ರಮ, ಪಕ್ಷದ ಕಾರ್ಯಕ್ರಮ ಅಲ್ಲ ಎಲ್ಲರೂ ಬೆಂಬಲಿಸುವ ನಿರೀಕ್ಷೆ ಇರಲಿಲ್ಲ, ಆದರು ಕೆಲವರು ಮಾತನಾಡಿದ್ದಾರೆ ಎಂದರು.
ನನ್ನ ಐಡಿಯಾಲಾಜಿಯಿಂದ ನಾನು ಹಿಂದೆ ಸರಿದಿಲ್ಲ. ಎಲ್ಲರಿಗೂ ಮನವರಿಕೆ ಮಾಡುವ ಪ್ರಯತ್ನವನ್ನು ಮುಂದಿನ ಹಂತಗಳಲ್ಲಿ ಮಾಡುತ್ತೇನೆ. ಈಗ ಅದರ ಅವಶ್ಯಕತೆ ಇಲ್ಲ ಎಂದು ನನ್ನ ಹೇಳಿಕೆ ವಾಪಸ್ಸು ಪಡೆದುಕೊಂಡಿದ್ದೇನೆ. ಇದು ಇಷ್ಟಕ್ಕೆ ನಿಂತಿಲ್ಲ ಸ್ವಪಕ್ಷ, ವಿರೋಧ ಪಕ್ಷ ಹಾಗೂ ಮಾಧ್ಯಮಗಳ ಮುಂದೆ ಕೆಲ ಸಂಗತಿ ಹೇಳ್ತಿವಿ. ನನ್ನ ಮಾತು ಸಾಬೀತು ಪಡಿಸುವ ಪ್ರಯತ್ನ ಮುಂದುವರಿಸುತ್ತೇನೆ. ಮುಂದಿನ ದಿನಗಳಲ್ಲಿ ನನ್ನ ಐಡಿಯಾಲಾಜಿ ಸಾಬೀತು ಮಾಡಿಯೇ ಮಾಡುತ್ತೇನೆ. ನನಗೆ ಪಕ್ಷ ದೊಡ್ಡದು ಹೀಗಾಗಿ ಪಕ್ಷದ ಡ್ಯಾಮೆಜ್ ಆಗಬಾರದೆಂದು ಆ ಪದ ವಾಪಸ್ ಪಡೆದಿರುವೆ ನನ್ನ ಮೇಲಿನ ಆರೋಪದ ಬಗ್ಗೆ ಎಲ್ಲರಿಗೂ ತಿಳಿಸುವ ಕೆಲಸ ಮಾಡ್ತಿವಿ. ಮುಖ್ಯಮಂತ್ರಿಗಳು ನನ್ನ ಪತ್ರದ ತನಿಖೆ ಮಾಡಬೇಕು ಎಂದು ಸತೀಶ ಜಾರಕಿಹೊಳಿ ಆಗ್ರಹಿಸಿದರು.
ನನ್ನದು ಏನೋ ಸಂಘಟನೆ, ಹೋರಾಟ ಇರಬಹುದು, ಬಹಳ ದೊಡ್ಡ ವ್ಯಕ್ತಿ ಇದ್ದರೂ ಕೂಡ ನಾನು ಓರ್ವ ಕಾಂಗ್ರೆಸ್ಸಿಗ. ನನಗೆ ಹೇಳುವ ಅಧಿಕಾರ ಮತ್ತು ಹಕ್ಕು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಇದೆ. ಇದರಿಂದ ನನಗೆ ಮತ್ತು ಪಕ್ಷಕ್ಕೆ ದೊಡ್ಡ ಡ್ಯಾಮೆಜ್ ಆಗಿದೆ. ತನಿಖೆ ಮಾಡುವಂತೆ ಸಿಎಂ ಮತ್ತು ಸರ್ಕಾರದ ಮೇಲೆ ಒತ್ತಡ ಹಾಕುವಂತೆ ನಮ್ಮ ಪಕ್ಷಕ್ಕೆ ತಿಳಿಸುತ್ತೇನೆ. ನನಗೆ ಯಾರದೇ ಒತ್ತಡ, ಇದರಲ್ಲಿ ಪ್ರೆಶರ್ ಪ್ರಶ್ನೆಯೇ ಇಲ್ಲ. ಸತೀಶ ಜಾರಕಿಹೊಳಿ ಸ್ಟಾಂಡ್‍ನಿಂದ ನನ್ನ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಎಂಬ ಪ್ರಮುಖ ಉದ್ದೇಶದಿಂದ ತೆಗೆದುಕೊಂಡ ನಿರ್ಣಯವಾಗಿದೆ ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
 Laxmi News 24×7
Laxmi News 24×7
				 
		 
						
					 
						
					 
						
					