ಕಬ್ಬು ಬೆಳೆಗಾರರಿಗೆ ಸಿಹಿ ಸುದ್ಧಿ ಕೊಡದ ಸಿಎಂ ಬೊಮ್ಮಾಯಿ ಜನಸಂಕಲ್ಪ ಯಾತ್ರೆಯಲ್ಲ, ಜನರ ಸಮಾಧಿಯ ಮೇಲೆ ರಾಜಕಾರಣ ಮಾಡುತ್ತಿದ್ದಾರೆಂದು ರೈತ ಮುಖಂಡ ಚೂನಪ್ಪ ಪೂಜಾರಿ ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ಕರೆಯಲಾಗಿದ್ದು ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ರಾಜ್ಯದ ಮುಖ್ಯಮಂತ್ರಿ ಕಬ್ಬಿನ ಬೆಲೆ ನಿಗದಿ ಮಾಡಿಲ್ಲ ಸಿಹಿ ಸುದ್ದಿ ಕೊಡ್ತೇವಿ ಅಂತಾ ಹೇಳಿದ್ರು. ಶುಗರ್ ಲಾಭಿಗೆ ಮಣಿದಿದ್ದಾರೆ ೮ ವರ್ಷದಿಂದ ೨೫೦೦ ತೆಗೆದುಕೊಳ್ಳುತ್ತಿದ್ದೇವೆ. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಎಫ್ ಆರ್ ಪಿ ಬೆಲೆಯಲ್ಲಿ ಮೋದಿ ಮೋಸ ಮಾಡಿದ್ದಾರೆ. ಎಫ್ ಆರ್ ಪಿ ಹೊರತುಪಡಿಸಿ ೩೫೦೦ನೂರು ಬೆಲೆ ನಿಗದಿ ಮಾಡಬೇಕು. ಈ ಬಗ್ಗೆ ಸರ್ಕಾರಕ್ಕೆ ಹಲವಾರು ಮನವಿ ಮಾಡಿದ್ದೇವೆ. ಬುಧವಾರದಂದು ಬೆಳಗಾವಿಗೆ ಬರುವ ಸಿಎಂ ಬೊಮ್ಮಾಯಿ ಅವರಿಗೆ ಖಡಕ್ ಎಚ್ಚರಿಕೆ ಕೊಡುತ್ತೇವೆ ಎಂದರು.
ಇನ್ನು ಸಿಎಂ ಬೊಮ್ಮಾಯಿ ಮಾಡುತ್ತಿರುವುದು, ಜನ ಸಂಕಲ್ಪ ಕಾರ್ಯಕ್ರಮವಲ್ಲ. ಜನರ ಸಮಾಧಿ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಈ ಬಗ್ಗೆ ಆರ್ ಎಸ್ ಎಸ್ ಕೂಡ ಅಭ್ಯಾಸ ಮಾಡಬೇಕು. ಕಬ್ಬಿನ ಬೆಲೆ ನಿಗದಿ ಮಾಡಬೇಕು.ಸಿಎಂ ಬರುವ ಸ್ಥಳದಲ್ಲೇ ಪ್ರತಿಭಟನೆ ಮಾಡುತ್ತೇವೆ. ಒಂದು ತಿಂಗಳಿಂದ ಸಿಎಂ ಸುಳ್ಳು ಹೇಳುತ್ತಿದ್ದಾರೆ.ಬೀದಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ,ನೀವು ಜನಸ್ಪಂದನ ಕಾರ್ಯಕ್ರಮ ಮಾಡುತ್ತೀದೀರಾ???.ಕಬ್ಬು ಬೆಳೆಗೆ ದರ ನಿಗದಿ ಮಾಡಿ ಬೆಳಗಾವಿಗೆ ಸಿಎಂ ಬರಬೇಕು ಎಂದು ಕಿಡಿಕಾರಿದರು.
ಈ ವೇಳೆ ರೈತ ಮುಖಂಡರಾದ ಶಿವಾನಂದ ಮುಗಳಿಹಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ಧರು.