ಬಿಜೆಪಿಯವರಿಗೆ ಮಾತನಾಡುವ ಶಕ್ತಿಯಿದೆ ಆದರೇ ಮಕ್ಕಳನ್ನು ಹುಟ್ಟಿಸುವ ಶಕ್ತಿಯಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಟುವಾಗಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ಅವರು ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದರು. ಇಂದು ನಾಳೆ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡ್ತಿವಿ, ಜೆಡಿಎಸ ಪಕ್ಷ ರಾಷ್ಟ್ರೀಯ ಪಕ್ಷವಲ್ಲ. ನಾನು ಕರೆದುಕೊಂಡು ಬಂದ ಜನರಿಗೆ ಭಾಷಣ ಮಾಡಲ್ಲ. ಬಂದ ಜನರಿಗೆ ಭಾಷಣ ಮಾಡುವ ಉದ್ದೇಶ ಹೊಂದಿದ್ದೇವೆ. ೨೦೨೩ರಲ್ಲಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗ್ತಾರೆ. ದೇಶದ ಪ್ರಧಾನಮಂತ್ರಿ ಆಗಿದ್ದ ದೇವೇಗೌಡರು, ಅವರ ಜೀವಿತ ಅವಧಿಯಲ್ಲಿ ರೈತ ಕಲ್ಯಾಣ ಮಾಡುವ ಗುರಿ ಹೊಂದಿದ್ದೇವೆ. ಜೆಡಿಎಸ ಪಂಚಾಯತಿ ಹಂತದಲ್ಲಿ ಉಚಿತವಾಗಿ ಶಿಕ್ಷಣ,ಆರೋಗ್ಯ, ವಸತಿ, ನೀರಾವರಿ ಯೋಜನೆ ಅನುಷ್ಠಾನ ಹಾಗೂ ಮಹಿಳಾ ಸಬಲೀಕರಣಕ್ಕೆ ಒತ್ತು ಕೊಟ್ಟಿದ್ದೇವೆ ಎಂದರು.
ಬಿಜೆಪಿ, ಕಾಂಗ್ರೆಸ್ ವಿರುದ್ಧ ಇಬ್ರಾಹಿಂ ವಾಗ್ದಾಳಿ, ೪೦ ಫರ್ಸೆಂಟೆಜ್ ಇವರು, ೨೦ ಫರ್ಸೆಂಟೆಜ್ ಅವರದ್ದು. ರಾಹುಲ್ ಗಾಂಧಿ ಬಂದರು ಹೋದ್ರು ಸಂದೇಶ ಏನು ಕೊಟ್ಟರು ಎಂದು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು ಜೆಡಿಎಸ ಟಿಕೆಟ್ ಪಡೆಯಲು ದುಡ್ಡು ಇಲ್ಲಾ, ಹೈಕಮಾಂಡ ಇಲ್ಲಾ. ಜಿಲ್ಲೆಯ ನಾಯಕರೇ ತೀರ್ಮಾನ ಮಾಡ್ತಾರೆ. ಇವತ್ತು ಕುಮಾರಸ್ವಾಮಿ ಅವರನ್ನ ಸಿಎಂ ಆಗುವಂತೆ ಮನೆಗೆ ಹೋದವರು ಇವರೇ. ಅವರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದವರು ಇವರೇ ತಾನೇ ಎಂದು ಪರೋಕ್ಷವಾಗಿ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಯವರಿಗೆ ಹೇಳ್ತಿನಿ ಸಿದ್ದರಾಮಯ್ಯ ಶಿವಕುಮಾರ ಅವರನ್ನ ಜೋಡೋ ಮಾಡಿ ಎಸ.ಆರ್.ಪಾಟೀಲ್ ಫೋಡೋ ಮಾಡಿ ಎಂದು ವ್ಯಂಗ್ಯವಾಡಿದವರು. ಸಿದ್ದರಾಮಯ್ಯ ಅವರನ್ನು ಟಿಕೆಟ್ ಕೊಡಿಸಲು ಕರೆ ತಂದವನು ನಾನೇ ಎಂದರು.
ಬೆಳಗಾವಿ ಜಿಲ್ಲೆಯ ೧೮ ಮತಕ್ಷೇತ್ರದಲ್ಲಿ ಜೆಡಿಎಸ ಅಭ್ಯರ್ಥಿ ಕಣಕ್ಕೆ ಇಳಿಸುತ್ತೇವೆ ಎಂದ ಅವರು ವಿಜಯಪುರ ಜೆಡಿಎಸ ಶಾಸಕ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತಾನಾಡಿ, ಬಿಜೆಪಿಯವರು ಹೇಳುತ್ತಿದ್ದರು ಅವರಿಗೆ ಗಂಡು ಮಕ್ಕಳನ್ನು ಹುಟ್ಟುಸುವ ಶಕ್ತಿಯಿದೆ ಅಂತಾ ಹೇಳಿ. ಆ ನಮ್ಮ ಮಕ್ಕಳಿಗೆ ಮಕ್ಕಳು ಹುಟ್ಟಿಸುವ ಶಕ್ತಿ ಇಲ್ಲಾ ಅಂತಾ ಹೇಳಿ ನಾವು ಹುಟ್ಟಿಸಿದ ಮಕ್ಕಳನ್ನ ತಗೊಂಡು ಹೋಗ್ತಾರಲ್ಲ ಎಂತಾ ಇವರೆಂಥ ಗಂಡಸರು. ಬಿಜೆಪಿಯವರು ಬೀಜ ಇಲ್ಲದವರು,ಇನ್ನೂಬ್ಬರ ಬೀಜ ತಗೊಂಡು, ನಮ್ಮ ಬೀಜ ಹಾಕ್ತಿರಾ ನಾಚೀಕೆ ಆಗಲ್ವಾ. ಇದೇನಾ ನಿಮಗೆ ಮೋದಿ ಕಲಿಸಿರುವುದು. ಅವರು ನೂರು ಜನಾ ಇದ್ದಾರೆ ನೀವು ಒಬ್ಬರು ಏನ್ ಮಾಡ್ತಿರಿ ಅಂತಾ ಕೇಳಿದ್ರು. ನಾ ಹೇಳ್ದೆ ನಾವು ರೈತರು ೫೦ ಆಕಳ ಕಟ್ಟಿದ್ರೆ ಹೋರಿ ಒಂದೇ ಕಟ್ಟೋದು. ೫೦ ಹೋರಿ ಕಟ್ಟಲ್ಲ ಒಂದೇ ಸಾಕು ನಮಗೆ ಅಂತಾ ಹೇಳಿದೆ. ಇವತ್ತು ಜನತಾ ದಳ, ದೇವೇಗೌಡರ ಬೀಜ ಬಲವಾಗಿದೆ .ಈ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ತಾರೆ.