Breaking News

499 ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಸುಕನ್ಯಾ ಸಮೃದ್ಧಿ ಪಾಸಬುಕ್ ಶಾಸಕ ಶ್ರೀಮಂತ ಪಾಟೀಲರು ವಿತರಿಸಿದರು.

Spread the love

ಕಾಗವಾಡ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕಾಡಳಿತ ಶಿಶು ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ 499 ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಸುಕನ್ಯಾ ಸಮೃದ್ಧಿ ಪಾಸಬುಕ್ ಶಾಸಕ ಶ್ರೀಮಂತ ಪಾಟೀಲರು ವಿತರಿಸಿದರು.

ಭಾನುವಾರದಂದು ಫರೀದಖಾನವಾಡಿ ಗ್ರಾಮದ ಕಟಿಗೇರಿ ಸಭಾ ಭವನದಲ್ಲಿ ಸುಕನ್ಯಾ ಸಮೃದ್ಧಿ ಪಾಸಬುಕ್ ವಿತರಣಾ ಕಾರ್ಯಕ್ರಮ ನೆರವೇರಿತು. ಕಾಗವಾಡ ತಾಲ್ಲೂಕಿನ ಎಲ್ಲ ಅಂಗನವಾಡಿ ಕಾರ್ಯಕರ್ತರು ಹಾಗೂ ಭಾಗ್ಯಲಕ್ಷ್ಮೀ ಫಲಾನುಭವಿಗಳು ಪಾಲ್ಗೊಂಡಿದ್ದರು.

ಸುಕನ್ಯಾ ಯೋಜನೆಯ ಪಾಸಬುಕ್ ವಿತರಿಸಿ ಶಾಸಕ ಶ್ರೀಮಂತ ಪಾಟೀಲರು ಮಾತನಾಡುವಾಗ, ದೇಶದ ಪ್ರಧಾನಿ ನರೇಂದ್ರ ಮೋದಿಜಿಯ ಒಂದೇ ಕನಸ್ಸಾಗಿದ್ದು, ದೇಶದಲ್ಲಿಯ ಎಲ್ಲ ಮಹಿಳೆಯರಿಗೆ ಒಳ್ಳೆಯ ಸನ್ಮಾನ ನೀಡಿದ್ದು, “ಬೇಟಿ ಬಚಾವೊ, ಬೇಟಿ ಪಢಾವೋ ” ಅವರ ಒಂದೇ ಗುರಿಯಾಗಿದೆ. ಆದರೂ, ಸಮಾಜದಲ್ಲಿ ಕೆಲವರು ಸ್ತ್ರೀ ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಇದೊಂದು ಕಲಂಕ ತರುವ ಕೃತ್ಯವಾಗಿದೆ.

ಬಡಕುಟುಂಬಗಳಲ್ಲಿ ಹೆಣ್ಣು ಮಗಳು ಜನಿಸಿದರೆ ಒಂದು ರೀತಿ ಅವರ ಕುಟುಂಬಕ್ಕೆ ಭಾರವಾಗುವ ಸಾಧ್ಯತೆ ಗಮನದಲ್ಲಿ ತೆಗೆದುಕೊಂಡು ರಾಜ್ಯ ಸರಕಾರ ಜನಿಸಿದ ಹೆಣ್ಣು ಮಗುವಿಗೆ ರಾಜ್ಯ ಸರಕಾರ ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಸುಕನ್ಯಾ, ಸಮೃದ್ಧಿ ಯೋಜನೆ ಮುಖಾಂತರ ವಯಸ್ಸಿನ ೨೧ರ ವರೆಗೆ ೧.೨೭ ಲಕ್ಷ ಹಣ ಅವಳ ಖಾತೆಗೆ ಸಂಗ್ರಹಿಸುವ ಈ ಯೋಜನೆಯಾಗಿದ್ದು, ತಾಲ್ಲೂಕಿನ ೪೯೯ ಹೆಣ್ಣು ಮಕ್ಕಳಿಗೆ ಈ ಯೋಜನೆಯ ಲಾಭ ನೀಡುತ್ತಿದ್ದೇವೆಯೆಂದು ಹೇಳಿದರು.


Spread the love

About Laxminews 24x7

Check Also

ಡಿಸಿ ಮುಂದೆ ಅಳಲು ತೋಡಿಕೊಂಡ ನಿರಾಶ್ರಿತರು

Spread the loveಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಗೋಕಾಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ