
ಬೆಂಗಳೂರು: ಕಾಂಗ್ರೆಸ್‍ನ ಬಸ್ ಈಗಾಗಲೇ ಪಂಕ್ಚರ್ ಆಗಿದೆ. 80 ವರ್ಷ ಆದ ಮೇಲೆ ಖರ್ಗೆ ಅವರನ್ನು ಈಗ ಡ್ರೈವರ್ ಸೀಟ್‍ನಲ್ಲಿ ಕೂರಿಸಿದ್ದಾರೆ ಎಂದು ಸಚಿವ ಆರ್. ಅಶೋಕ್ (R Ashok) ಲೇವಡಿ ಮಾಡಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಬಸ್ ಯಾತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‍ನವರ ಬಸ್ ಈಗಾಗಲೇ ಪಂಕ್ಚರ್ ಆಗಿದೆ. 80 ವರ್ಷ ಆದ ಮೇಲೆ ಖರ್ಗೆ (Mallikarjun Kharge) ಅವರನ್ನು ಈಗ ಡ್ರೈವರ್ ಸೀಟ್‍ನಲ್ಲಿ ಕೂರಿಸಿದ್ದಾರೆ. ಆದರೆ ಆ ಡ್ರೈವರ್ ಬ್ಯಾಕ್‍ಸೀಟ್‍ನಲ್ಲಿ ಸೋನಿಯಾ ಗಾಂಧಿ (Sonia Gandhi) ಇದ್ದಾರೆ. ಬಸ್‍ನ ಸ್ಟೇರಿಂಗ್, ಸೀಟು ಎಲ್ಲವೂ ಸೋನಿಯಾ ಗಾಂಧಿ ಕೈಯಲ್ಲಿ ಇರಲಿದೆ. ಖರ್ಗೆ ರಿಮೋಟ್ ಕಂಟ್ರೋಲ್ ಅಧ್ಯಕ್ಷ ಅಷ್ಟೇ ಎಂದು ಟೀಕಿಸಿದರು.
ಕಾಂಗ್ರೆಸ್ ಅವರು ಬಸ್, ರೈಲು, ಏನಾದರೂ ಬಿಡಲು ಕರ್ನಾಟಕದ (Karnataka) ಜನ ಇವರನ್ನು ನಂಬುವುದಿಲ್ಲ. ಕಾಂಗ್ರೆಸ್‍ಗೆ ಇದು ಕೊನೆಯ ಚುನಾವಣೆ. ಕಾಂಗ್ರೆಸ್‍ನ ಶವ ಪೆಟ್ಟಿಗೆಯ ಕೊನೆ ಮೊಳೆ ಕರ್ನಾಟಕದ ರಾಜ್ಯದ ಜನ ಹೊಡೆಯುತ್ತಾರೆ ಎಂದರು.
Laxmi News 24×7