ರಾಯಚೂರು: ರಾಜ್ಯದಲ್ಲಿ ಜನವರಿ ಬಳಿಕ ಕಾಂಗ್ರೆಸ್ ಮಾತ್ರವಲ್ಲ ಎಲ್ಲ ಪಕ್ಷಗಳಲ್ಲೂ ಪಕ್ಷಾಂತರ ಮಾಡುವ ನಾಯಕರಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಶನಿವಾರ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ‘ಭಾರತ್ ಜೋಡೋ’ ಕಾರ್ಯಕ್ರಮ ನಿಮಿತ್ತ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದವರು ಬೇರೆ ಕಡೆ ಹೋಗುತ್ತಾರೆ. ಆ ಪಕ್ಷದವರು ನಮ್ಮಲ್ಲಿಗೆ ಬರುತ್ತಾರೆ. ಚುನಾವಣೆ ಬಂದರೆ ಇದೊಂದು ಸಾಮಾನ್ಯ ಪ್ರಕ್ರಿಯೆ. ಆದರೆ, ಯಾರು ಹೋಗುತ್ತಾರೆ, ಬರುತ್ತಾರೆ ಎಂಬದು ಗೊತ್ತಾಗಬೇಕಾದರೆ ಜನವರಿವರೆಗೂ ಕಾಯಬೇಕು ಎಂದರು.
Laxmi News 24×7