Breaking News

ಚನ್ನಮ್ಮ ಕಿತ್ತೂರು ಉತ್ಸವ-2022ಕ್ಕೆ ವೀರರಾಣಿ ಚನ್ನಮ್ಮಾಜಿಯ ತವರೂರು ಕಾಕತಿಯಲ್ಲಿ ಅದ್ಧೂರಿಯಾಗಿ ಚಾಲನೆ

Spread the love

ಚನ್ನಮ್ಮ ಕಿತ್ತೂರು ಉತ್ಸವ-2022ಕ್ಕೆ ವೀರರಾಣಿ ಚನ್ನಮ್ಮಾಜಿಯ ತವರೂರು ಕಾಕತಿಯಲ್ಲಿ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ.

ಹೌದು ರವಿವಾರ ಚನ್ನಮ್ಮಾಜಿಯ ತವರೂರು ಕಾಕತಿಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಚನ್ನಮ್ಮ ಕಿತ್ತೂರು-ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವೇಳೆ ಕಾರ್ಯಕ್ರಮಕ್ಕೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಚನ್ನಮ್ಮಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ವಿವಿಧ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ಕಾಕತಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಈ ವೇಳೆ ಕುಂಭ ಹೊತ್ತ ಮಹಿಳೆಯರು, ಚನ್ನಮ್ಮಾಜಿ ವೇಷಭೂಷಣ ತೊಟ್ಟ ಮಕ್ಕಳು ಎಲ್ಲರ ಗಮನ ಸೆಳೆದರು.

ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಅಣ್ಣಾಸಾಹೇಬ ಜೊಲ್ಲೆ ಎಲ್ಲರೂ ಕೂಡಿ ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಕಾಕತಿ ಅಭಿವೃದ್ಧಿಗೆ ಪಣ ತೊಡಬೇಕಿದೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಂತೆ ಕಾಕತಿಯಲ್ಲಿಯೂ ಅಭಿವೃದ್ಧಿ ಮಾಡಬೇಕಿದೆ. ಕಾಕತಿ ಕೋಟೆ, ದೇಸಾಯಿ ಅವರ ಅರಮನೆ ಅಭಿವೃದ್ಧಿಗೆ ನಾನು ಕೂಡ 25 ಲಕ್ಷ ರೂಪಾಯಿ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.

ನಂತರ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ ಮಾತನಾಡಿ ಚನ್ನಮ್ಮಾಜಿ ಕನ್ನಡಕ್ಕೆ ಸಂಬಂಧ ಪಟ್ಟಿದ್ದಾರೆ. ಶಿವಾಜಿ ಮಹಾರಾಜರು ಮರಾಠಿಗೆ ಸಂಬಂಧಿಸಿದವರು ಎಂಬ ಭಾವನೆಯನ್ನು ಮೊದಲು ನಾವು ಬಿಡಬೇಕಿದೆ. ರಾಣಿ ಚನ್ನಮ್ಮಾಜಿ ಮತ್ತು ಶಿವಾಜಿ ಮಹಾರಾಜರು ನಮ್ಮ ನೆಲ, ಜಲ, ನಾಡಿಗಾಗಿ ಹೋರಾಟದ ಮಾಡಿದ ಮಹನೀಯರು. ಪ್ರತಿ ಕಿತ್ತೂರು ಉತ್ಸವಕ್ಕೂ ಪ್ರತಿ ಮನೆಯಲ್ಲಿಯೂ ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕಿದೆ. ಮುಂದಿನ ವರ್ಷ ಆ ಸಿದ್ದೇಶ್ವರನ ಆಶೀರ್ವಾದಿಂದ ಇದು ಈಡೇರಲಿ. ಕಿತ್ತೂರಿನ ಯಾವ ರೀತಿ ಚನ್ನಮ್ಮಾಜಿ ಅರಮನೆ ಮರು ನಿರ್ಮಾಣ ಆಗುತ್ತಿದೆ. ಅದೇ ರೀತಿ ಕಾಕತಿಯಲ್ಲಿಯೂ ದೇಸಾಯಿ ಅವರ ಅರಮನೆ ಮರು ನಿರ್ಮಾಣ ಮಾಡುವ ಕೆಲಸ ಮಾಡಬೇಕಿದೆ ಎಂದರು.


Spread the love

About Laxminews 24x7

Check Also

ಚಿನ್ನಸ್ವಾಮಿ ಕಾಲ್ತುಳಿತ ಘಟನೆಗೆ ಆಯೋಜಕರು ಹೆಚ್ಚಿನ ಕಾರಣೀಕರ್ತರಾಗಿದ್ದಾರೆ: ಸಚಿವ ಜಿ.ಪರಮೇಶ್ವರ್

Spread the loveಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಆಯೋಜನೆ ಮಾಡಿದವರು ಹೆಚ್ಚಿನ ಕಾರಣೀಕರ್ತರಾಗಿದ್ದಾರೆ ಎಂದು ಗೃಹ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ