Breaking News
Home / ರಾಜಕೀಯ / ಪ್ರತಿಟನ್ ಕಬ್ಬಿಗೆ ೫೫೦೦/- ಬೆಲೆ ನೀಡಬೇಕೆಂದು ಕಬ್ಬು ಬೆಳೆಗಾರರು ಆರಂಭಿಸಿದ ಹೋರಾಟ ಇಂದು ಕೂಡ ಮುಂದೆವರಿದಿದೆ.

ಪ್ರತಿಟನ್ ಕಬ್ಬಿಗೆ ೫೫೦೦/- ಬೆಲೆ ನೀಡಬೇಕೆಂದು ಕಬ್ಬು ಬೆಳೆಗಾರರು ಆರಂಭಿಸಿದ ಹೋರಾಟ ಇಂದು ಕೂಡ ಮುಂದೆವರಿದಿದೆ.

Spread the love

ಪ್ರತಿಟನ್ ಕಬ್ಬಿಗೆ ೫೫೦೦/- ಬೆಲೆ ನೀಡಬೇಕೆಂದು ಕಬ್ಬು ಬೆಳೆಗಾರರು ಆರಂಭಿಸಿದ ಹೋರಾಟ ಇಂದು ಕೂಡ ಮುಂದೆವರಿದಿದೆ. ವಿಧಾನಸಭೆಯ ಉಪಸಭಾಪತಿ ಆನಂದ ಮಾಮನಿ ನಿಧನ ಮತ್ತು ಕಿತ್ತೂರು ಉತ್ಸವದ ಹಿನ್ನೆಲೆ ಸಾಂಕೇತಿಕವಾಗಿ ಇಂದು ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದರು.

 

ಭಾನುವಾರದAದು ಬೆಳಗಾವಿ ತಾಲೂಕು, ಮೂಡಲಗಿ ತಾಲೂಕು ಮತ್ತು ಗೋಕಾಕ ತಾಲೂಕಿನಿಂದ ಆಗಮಿಸಿದ ರೈತರು ಪ್ರತಿಟನ್ ಕಬ್ಬಿಗೆ ೫೫೦೦/- ಬೆಲೆ ನೀಡುವಂತೆ ಒತ್ತಾಯಿಸಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಜೈ ಜವಾನ್ – ಜೈ ಕಿಸಾನ್ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯ÷ಕ್ತಪಡಿಸಿದರು.

ಕಬ್ಬು ಬೆಳೆಗಾರರು ಬೆಂಬಲ ಬೆಲೆಗಾಗಿ ನಿರಂತರ ಹೋರಾಟ ಮಾಡುವ ವೇಳೆ ಅವರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಉತ್ತರ ಕರ್ನಾಟಕದ ಸವದತ್ತಿಯ ಶಾಸಕ ಉಪಸಭಾಪತಿ ಆನಂದ ಮಾಮನಿ ಅವರ ನಿಧನದ ಹಿನ್ನೆಲೆ ರೈತರು ಸಾಂಕೇತಿಕವಾಗಿ ಹೋರಾಟ ಮಾಡುತ್ತಿದ್ದಾರೆ.

ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ದೀಪಾವಳಿಯ ವೇಳೆ ಸಿಹಿ ಉಡುಗೊರೆ ಕೊಡುವುದಾಗಿ ಹೇಳಿದ್ದರು. ಸಿಎಂ ಅವರಿಗೆ ಮನವರಿಕೆ ಮಾಡಿ ಯೋಗ್ಯ ಬೆಲೆ ಕೊಡುವುದಾಗಿ ಹೇಳಿ ಮಾತು ತಪ್ಪಿದ್ದಾರೆ. ಕಿತ್ತೂರು ಉತ್ಸವಕ್ಕೆ ಅಡ್ಡಿಯಾಗದಂತೆ ಅಲ್ಲದೇ ಆನಂದ ಮಾಮನಿ ಅವರಿಗೆ ಅಗೌರವ ತೋರದೇ ಹೋರಾಟವನ್ನು ಮುಂದುವರೆಸಿದ್ದೇವೆ. ರೈತರಿಗೆ ೫೫೦೦/- ರೂಪಾಯಿ ಬೆಲೆ ನೀಡದಿದ್ದರೇ ಉಗ್ರ ಹೋರಾಟ ಮಾಡಲಾಗುವುದು ಎಂದು ರೈತ ಹೋರಾಟಗಾರ ಶ್ರೀಶೈಲ ಅಂಗಡಿ ಎಚ್ಚರಿಕೆ ನೀಡಿದರು.


Spread the love

About Laxminews 24x7

Check Also

ಬಂಗಾರ ದರ ಮತ್ತೆ ಇಳಿಕೆ

Spread the love 26: ಬಂಗಾರ ದರ ನಿನ್ನೆಗೆ ಅಂದರೆ ಜೂನ್‌ 25ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್‌ 24) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ