Breaking News

ನಮ್ಮನ್ನು ತುಳಿಯುತ್ತಿದಾರೆ, ಎಲ್ಲಾ ಗೊತ್ತಾಗ್ತಿದೆ ಎಂದು ಆಕ್ರೋಶಗೊಂಡ ಡಾಲಿ, ಯೋಗಿ!

Spread the love

ಟನಾಗಿ ಚಿತ್ರರಂಗ ಪ್ರವೇಶಿಸಿ ಟಗರು ಚಿತ್ರದ ವಿಲನ್ ರೋಲ್ ಮೂಲಕ ದೊಡ್ಡ ತಿರುವು ಪಡೆದುಕೊಂಡ ಧನಂಜಯ್ ನಂತರ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಕಂಡರು. ಕನ್ನಡದ ನಂತರ ಟಾಲಿವುಡ್ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ ಧನಂಜಯ ಅಲ್ಲು ಅರ್ಜುನ್ ಅಭಿನಯದ ಪುಷ್ಪದಂತಹ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು.

ಹೀಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಧನಂಜಯ್ ನಿರ್ಮಾಪಕನಾಗಿಯೂ ಬಡ್ತಿ ಪಡೆದಿದ್ದಾರೆ.

ಶಂಕರ್ ಗುರು ನಿರ್ದೇಶನದ ಬಡವ ರಾಸ್ಕಲ್ ಚಿತ್ರದಲ್ಲಿ ಅಭಿನಯಿಸುವುದರ ಜತೆಗೆ ಹಣವನ್ನು ಹೂಡಿದ್ದ ಧನಂಜಯ್ ನಿರ್ಮಾಪಕನಾಗಿ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಸಾಧಿಸಿದ್ದರು. ಸದ್ಯ ಧನಂಜಯ್ ನಿರ್ಮಾಪಕನಾಗಿ ಎರಡನೇ ಬಾರಿಗೆ ಹಣವನ್ನು ಹೂಡಿದ್ದು, ಹೆಡ್ ಬುಷ್ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿಯೇ ಬಂಡವಾಳ ಹಾಕಿದ್ದಾಗಿ ಹೇಳಿಕೊಂಡಿದ್ದಾರೆ.

ಇನ್ನು ಹೆಡ್ ಬುಷ್ ಚಿತ್ರ ನಿನ್ನೆಯಷ್ಟೇ ( ಅಕ್ಟೋಬರ್ 21 ) ಬಿಡುಗಡೆಗೊಂಡಿದ್ದು, ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಬಿಡುಗಡೆಯ ದಿನಕ್ಕೂ ಮುನ್ನ ನಡೆದ ಪ್ರೀಮಿಯರ್ ಶೋನಿಂದಲೂ ಉತ್ತಮ ವಿಮರ್ಶೆ ಪಡೆದುಕೊಳ್ಳುತ್ತಿರುವ ಹೆಡ್ ಬುಷ್ ಹಿಟ್ ಆಗಲಿದೆ ಎಂಬ ಟಾಕ್ ಕೂಡ ಇದೆ. ಇದು ಸಾಮಾನ್ಯ ರೌಡಿಸಂ ಚಿತ್ರವಲ್ಲ, ಒಂದೊಳ್ಳೆ ಸಂದೇಶವಿದೆ ಎಂದು ಕೆಲ ಸಿನಿಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರ ವೀಕ್ಷಿಸಲು ಮೊದಲ ದಿನ ಮುಖ್ಯ ಚಿತ್ರಮಂದಿರಕ್ಕೆ ಆಗಮಿಸಿದ್ದ ಡಾಲಿ ಧನಂಜಯ್ ಹಾಗೂ ಯೋಗಿ ವೀಕ್ಷಕರ ಪ್ರತಿಕ್ರಿಯೆ ಕಂಡು ಭಾವುಕರಾಗಿ ಮಾಧ್ಯಮದವರ ಜತೆ ಮಾತನಾಡಿದರು.


Spread the love

About Laxminews 24x7

Check Also

ಪುಲ್ವಾಮಾ ದಾಳಿಗೆ 7 ವರ್ಷ

Spread the loveಪ್ರತಿ ವರ್ಷ ಪ್ರೇಮಿಗಳ ದಿನವನ್ನಾಗಿ ಆಚರಿಸುವ ಪ್ರತಿಯೊಬ್ಬರಿಗೂ ಇದು ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ದಿನ ಅನ್ನೋದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ