Home / ಜಿಲ್ಲೆ / ಬೆಳಗಾವಿ / ಕಿತ್ತೂರ ರಾಣಿ ಚನ್ನಮ್ಮಳ ದೇಶ ಪ್ರೇಮ, ಶೌರ್ಯ ಇಂದಿನ ಮಕ್ಕಳಿಗೆ ತಿಳಿವಂತಾಗ ಬೇಕು: ಪವನ ಕತ್ತಿ

ಕಿತ್ತೂರ ರಾಣಿ ಚನ್ನಮ್ಮಳ ದೇಶ ಪ್ರೇಮ, ಶೌರ್ಯ ಇಂದಿನ ಮಕ್ಕಳಿಗೆ ತಿಳಿವಂತಾಗ ಬೇಕು: ಪವನ ಕತ್ತಿ

Spread the love

ನಮ್ಮ ನಾಡಿನ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ಚನ್ನಮ್ಮಳ ಇತಿಹಾಸ ನಮ್ಮ ಮಕ್ಕಳಿಗೆ ತಿಳಿಸುವದು ಅವಶ್ಯವಾಗಿದೆ ಎಂದು ಹೀರಾ ಶುಗರ ನಿರ್ದೆಶಕ ಪವನ ಕತ್ತಿ ಹೇಳಿದರು.

ಕಿತ್ತೂರು ಉತ್ಸವ ಅಂಗವಾಗಿ ರಾಜ್ಯಾದ್ಯಾಂತ ಸಂಚರಿಸುತ್ತಿರುವ ಕಿತ್ತೂರ ಜ್ಯೋತಿಯನ್ನು ಇಂದು ತಾಲೂಕಾ ಆಡಳಿತ ವತಿಯಿಂದ ಭವ್ಯವಾದ ಸ್ವಾಗತ ಕೋರಲಾಯಿತು.
ಅಡವಿಸಿದ್ದೇಶ್ವರ ಮಠದ ಆವರಣದಲ್ಲಿ ತಹಸಿಲ್ದಾರ ಡಾ, ಡಿ ಎಚ್ ಹೂಗಾರ ಜ್ಯೋತಿ ಹೋತ್ತ ರಥವನ್ನು ಬರಮಾಡಿಕೊಂಡು ಪೂಜೆ ಸಲ್ಲಿಸಿದರು.

ಮಾದ್ಯಮಗಳೊಂದಿಗೆ ಮಾತನಾಡಿದ ತಹಸಿಲ್ದಾರ ಹೂಗಾರ ಪ್ರಥಮಬಾರಿಗೆ ಕರ್ನಾಟಕ ಸರ್ಕಾರ ರಾಜ್ಯಮಟ್ಟದಲ್ಲಿ ಕಿತ್ತೂರ ಉತ್ಸವ ಆಚರಿಸಲಾಗುತ್ತಿದೆ ಇಂದು ವೀರ ಜ್ಯೋತಿ ಯನ್ನು ಕುಂಬ ಮೇಳದೊಂದಿಗೆ ಹುಕ್ಕೇರಿಗೆ ಸ್ವಾಗತಿಸಿ ಪೂಜೆ ಸಲ್ಲಿಸಲಾಗಿದೆ ಎಂದರು

ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕರ್ತೆಯರು ಕುಂಭ ಮೇಳದೊಂದಿಗೆ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ವೀರಜ್ಯೋತಿಯನ್ನು ಬಿಳ್ಕೊಟ್ಟರು.

ಮಾದ್ಯಮಗಳೊಂದಿಗೆ ಮಾತನಾಡಿದ ಪವನ ಕತ್ತಿ ಪ್ರಥಮ ಬಾರಿಗೆ ರಾಜ್ಯ ಮಟ್ಟದಲ್ಲಿ ಕಿತ್ತೂರ ಉತ್ಸವ ಆರಂಬಿಸಿದ ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಯವರಿಗೆ ಅಭಿನಂದನೆ ಸಲ್ಲಿಸಿ, ಕಿತ್ತೂರ ರಾಣಿ ಚನ್ನಮ್ಮಳ ದೇಶ ಪ್ರೇಮ, ಶೌರ್ಯ ಇಂದಿನ ಮಕ್ಕಳಿಗೆ ತಿಳಿವಂತಾಗ ಬೇಕು ಕಾರಣ ಪ್ರತಿ ವರ್ಷ ಕಿತ್ತೂರ ಉತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕು ಎಂದರು


Spread the love

About Laxminews 24x7

Check Also

ಆಡಳಿತದಲ್ಲಿ ಪಾರದರ್ಶಕತೆ ಕೊರತೆ: ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ದೇಶಪಾಂಡೆ ಬೇಸರ

Spread the love ಬೆಳಗಾವಿ: ‘ಸರ್ಕಾರಿ ಯೋಜನೆಗಳ ಪ್ರಯೋಜನ ದೊರೆಯಬೇಕಾದರೆ ಆಡಳಿತದಲ್ಲಿ ಸುಧಾರಣೆ ಅತ್ಯಗತ್ಯ. ಇತ್ತೀಚೆಗೆ ಆಡಳಿತದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ