ಹುಬ್ಬಳ್ಳಿ: ಹಲಾಲ್ ಮುಕ್ತ ದೀಪಾವಳಿ ಆಚರಿಸುವ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಂದ ಹಬ್ಬದ ಸಾಮಗ್ರಿ ಖರೀದಿಸ ಬಾರದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಸ್ಲಿಮರಿಂದ ಹಬ್ಬದ ಸಾಮಗ್ರಿ ಖರೀದಿಸಿ ದರೆ ಅದು ಶಾಸ್ತ್ರೋಕ್ತ ಎನ್ನಿಸುವುದಿಲ್ಲ.
ಇದರೊಂದಿಗೆ ಹಲಾಲ್ ಗುರುತು ಇರುವ ವಸ್ತುಗಳನ್ನು ಕಡೆಗಣಿಸಬೇಕು.
ಈ ಗುರುತಿಗೆ ಸರಕಾರದಿಂದ ಯಾವುದೇ ಮಾನ್ಯತೆ ಇಲ್ಲ ಎಂದು ಅವರು ಹೇಳಿದರು.