Breaking News

ಅಡ್ವಾಣಿ ಭೇಟಿಯಾದ ಪೇಜಾವರಶ್ರೀ- ರಾಮಮಂದಿರ ಹೋರಾಟ ದಿನಗಳ ಮೆಲುಕು

Spread the love

ಉಡುಪಿ/ನವದೆಹಲಿ: ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ (Vishwaprasanna Teertha) ಶ್ರೀಪಾದರು ದೆಹಲಿಯಲ್ಲಿ ಮಾಜಿ ಉಪಪ್ರಧಾನಿ ಬಿಜೆಪಿ (BJP) ಹಿರಿಯ ನಾಯಕ ಎಲ್.ಕೆ ಅಡ್ವಾಣಿ (LK Adwani) ಯವರನ್ನು ಅವರ ನಿವಾಸದಲ್ಲಿ ಸೌಹಾರ್ದ ಭೇಟಿ ಮಾಡಿದರು. ಈ ವೇಳೆ ರಾಮಮಂದಿರ (Ramamandir) ಹೋರಾಟ ಮತ್ತು ಮಂದಿರ ನಿರ್ಮಾಣ ಕಾರ್ಯದ ಪ್ರಗತಿ ಬಗ್ಗೆ ಮಾತನಾಡಿದರು.

ಅಡ್ವಾಣಿಯವರೊಂದಿಗೆ ಉಭಯಕುಶಲೋಪರಿ ನಡೆಸಿ ಅವರಿಗೆ ದೀರ್ಘಾಯುರಾರೋಗ್ಯವನ್ನು ಶ್ರೀಕೃಷ್ಣನಲ್ಲಿ ಪ್ರಾರ್ಥಿಸುವುದಾಗಿ ಪೇಜಾವರಶ್ರೀ (Pejawara Sri) ತಿಳಿಸಿದರು. ಅಯೋಧ್ಯಾ (Ayodhya) ರಾಮಜನ್ಮಭೂಮಿ ಆಂದೋಲನದಲ್ಲಿ ಅಡ್ವಾಣಿಯವರ ಪಾತ್ರವನ್ನು ಶ್ರೀಗಳು ಬಣ್ಣಿಸಿ ಆ ಹೋರಾಟದ ಫಲವಾಗಿ ಇಂದು ಭವ್ಯ ರಾಮಮಂದಿರ ನಿರ್ಮಾಣಗೊಳ್ಳುವಂತಾಗಿದೆ. ದೇವರು ನಿರ್ಮಾಣ ಪ್ರಗತಿಯಲ್ಲಿದ್ದು, ಇನ್ನೊಂದು ವರ್ಷದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವುದಾಗಿ ಹೇಳಿದರು.

ವಿಶ್ವೇಶತೀರ್ಥ ಶ್ರೀಪಾದರು ತಮಗೆ ನೀಡಿದ ಸ್ಫೂರ್ತಿಯನ್ನು ಎಲ್.ಕೆ. ಅಡ್ವಾಣಿ ಸ್ಮರಿಸಿದರು. ಆ ಕಾಲದ ದಿನಗಳನ್ನು ನೆನೆದರು. ಅಡ್ವಾಣಿಯವರಿಗೆ ಶ್ರೀಕೃಷ್ಣನ ಗಂಧ ಪ್ರಸಾದ, ಶಾಲು ಸ್ಮರಣಿಕೆ ಫಲ ಮಂತ್ರಾಕ್ಷತೆಯಿತ್ತು ಸ್ವಾಮೀಜಿ ಆಶೀರ್ವದಿಸಿದರು. ಅಡ್ವಾಣಿಯವರ ಪುತ್ರಿ ಪ್ರತಿಭಾ ಅಡ್ವಾಣಿ ಮತ್ತು ಮನೆ ಮಂದಿ ಶ್ರೀಗಳವರನ್ನು ಬರಮಾಡಿಕೊಂಡು ಸ್ವಾಗತಿಸಿದರು. ಅಡ್ವಾಣಿಯವರಿಗೆ ಅನಾರೋಗ್ಯವಿದ್ದರೂ ಮನೆ ಬಾಗಿಲಿನವರೆಗೆ ಬಂದು ಶ್ರೀಗಳವರನ್ನು ಬೀಳ್ಕೊಟ್ಟರು. ವಿದ್ವಾನ್ ದೇವಿಪ್ರಸಾದ್ ಭಟ್ವ, ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಯುಪಿಎಸ್​​ಸಿ ಪರೀಕ್ಷೆಯಲ್ಲಿ ಹಾಸನದ ಕೆ.ಎಸ್. ಧನ್ಯಗೆ 982ನೇ ರ‍್ಯಾಂಕ್

Spread the loveಹಾಸನ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್​​ಸಿ) ಈ ಸಾಲಿನ ಪರೀಕ್ಷೆಯಲ್ಲಿ ಸಕಲೇಶಪುರ ಪಟ್ಟಣದ ಮಲ್ಲಿಕಾರ್ಜುನನಗರದ ನಿವಾಸಿ ಕೆ.ಎಸ್.ಧನ್ಯ 982ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ