ಬೆಂಗಳೂರು: ರಿಷಬ್ ಶೆಟ್ಟಿ ಅವರ ʼಕಾಂತಾರʼ ಹವಾ ಇನ್ನೂ ಕಮ್ಮಿಯಾಗಿಲ್ಲ. ವಿಶ್ವದೆಲ್ಲೆಡೆ ಸಿನಿಮಾದ ಬಗ್ಗೆ ಸಿಗುತ್ತಿರುವ ರೆಸ್ಪಾನ್ಸ್ ನಿಂದ ಚಿತ್ರವನ್ನು ಇತರ ಭಾಷೆಯಲ್ಲಿ ಡಬ್ ಮಾಡಿ ರಿಲೀಸ್ ಮಾಡಲು ಚಿತ್ರ ತಂಡ ನಿರ್ಧರಿಸಿದ್ದು, ಮೊದಲ ಹಂತವಾಗಿ ಪೋಸ್ಟರ್ , ಟ್ರೇಲರ್ ಗಳು ರಿಲೀಸ್ ಆಗಿವೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ʼಕಾಂತಾರʼ ತುಳುನಾಡಿನ ಆಚರಣೆ, ಅರಣ್ಯಕ್ಕೆ ಹೊಂದಿಕೊಂಡಿರುವ ಜನರ ನಂಬಿಕೆಯ ಸುತ್ತ ಸಾಗುವ ಚಿತ್ರವಾಗಿದ್ದು, ರಿಷಬ್ ಅಭಿನಯ ಹಾಗೂ ದೃಶ್ಯಗಳಿಂದ ಚಿತ್ರ ಗಮನ ಸೆಳೆಯುತ್ತದೆ.
ಹಿಂದಿ, ತಮಿಳು,ತೆಲುಗು, ಮಲಯಾಳಂ ಭಾಷೆಯಲ್ಲಿ ಚಿತ್ರ ಡಬ್ ಆಗಿ ರಿಲೀಸ್ ಆಗಲಿದ್ದು, ಇದರಲ್ಲಿ ಹಿಂದಿ ಹಾಗೂ ತೆಲುಗು ಭಾಷೆಯ ಟ್ರೇಲರ್ ಈಗಾಗಲೇ ರಿಲೀಸ್ ಆಗಿದೆ. ಹಿಂದಿಯಲ್ಲಿ ಡಬ್ ಆಗಿರುವ ʼಕಾಂತಾರʼ ಅಕ್ಟೋಬರ್ 14 ರಂದು ಥಿಯೇಟರ್ ನಲ್ಲಿ ಬಿಡುಗಡೆ ಆಗಲಿದೆ. ಇನ್ನು ತೆಲುಗಿನಲ್ಲಿ ಚಿತ್ರ ಅಕ್ಟೋಬರ್ 15 ರಂದು ಬಿಡುಗಡೆ ಆಗಲಿದೆ. ಉಳಿದ ಭಾಷೆಯಲ್ಲಿ ಡಬ್ ಆಗಿರುವ ಚಿತ್ರದ ರಿಲೀಸ್ ಡೇಟ್ ಶೀಘ್ರದಲ್ಲಿ ಹೊರ ಬರಲಿದೆ.
ರಿಷಭ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ, ಸ್ವರಾಜ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅಜನೀಶ್ ಲೋಕನಾಥ್ ಮ್ಯೂಸಿಕ್ , ಅರವಿಂದ್ ಕಶ್ಯಪ್ ಛಾಯಗ್ರಹಣ ಮಾಡಿದ್ದಾರೆ.
Laxmi News 24×7