ಹೊಸದಿಲ್ಲಿ: ಮುಂಬೈನ ಅಂಧೇರಿ ಪೂರ್ವದಲ್ಲಿ ನಡೆಯಲಿರುವ ಉಪ ಚುನಾವಣೆಗೆ ಶಿವಸೇನೆಯ ಉದ್ಧವ್ ಠಾಕ್ರೆ ಬಣವು ಮೂರು ಹೆಸರು ಮತ್ತು ಚಿಹ್ನೆಗಳ ಪಟ್ಟಿಯನ್ನು ನೀಡಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಮೊದಲ ಆಯ್ಕೆಯ ಹೆಸರು ‘ಶಿವಸೇನಾ ಬಾಳಾಸಾಹೇಬ್ ಠಾಕ್ರೆ’ ಮತ್ತು ‘ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ’ ಎರಡನೇ ಆಯ್ಕೆಯಾಗಿದೆ ಎಂದು ಅವರು ಹೇಳಿದರು.
ಚಿಹ್ನೆಯ ಆಯ್ಕೆ ವಿಚಾರದಲ್ಲಿ ತ್ರಿಶೂಲ ತನ್ನ ಮೊದಲ ಆಯ್ಕೆಯ ಚಿಹ್ನೆ ಮತ್ತು ಸುರ್ಯೋದಯದ ಚಿತ್ರ ಎರಡನೇ ಆಯ್ಕೆ ಎಂದು ಹೇಳಿದೆ.
ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಇಬ್ಬರೂ ಇಂದು ತಮ್ಮ ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಉದ್ಧವ್ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಸಿದರೆ, ಶಿಂಧೆ ಸಂಜೆ 7 ಗಂಟೆಗೆ ಸಭೆ ನಡೆಸುತ್ತಾರೆ.
1989 ರಲ್ಲಿ ಶಿವಸೇನೆಯು ತನ್ನ ನಿಶ್ಚಿತ ಚಿಹ್ನೆಯಾದ ಬಿಲ್ಲು ಮತ್ತು ಬಾಣವನ್ನು ಪಡೆದುಕೊಂಡಿತ್ತು. ಅದಕ್ಕೂ ಮೊದಲು ಶಿವಸೇನೆಯು ಕತ್ತಿ ಮತ್ತು ಗುರಾಣಿ, ತೆಂಗಿನ ಮರ, ರೈಲ್ವೇ ಇಂಜಿನ್ ಮತ್ತು ಕಪ್ ಮತ್ತು ತಟ್ಟೆಯಂತಹ ವಿಭಿನ್ನ ಚಿಹ್ನೆಗಳ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ನೇತೃತ್ವದ ಹೋರಾಟದ ಬಣಗಳ ನಡುವಿನ ವಿವಾದದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ರವಿವಾರ ಶಿವಸೇನೆ ಹೆಸರು ಮತ್ತು ಅದರ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಸ್ಥಂಬನಗೊಳಿಸಿತ್ತು. ಅಲ್ಲದೆ ಮೂರು ಹೆಸರುಗಳು ಮತ್ತು ಚಿಹ್ನೆಗಳ ಪಟ್ಟಿಯನ್ನು ನೀಡುವಂತೆ ಎರಡೂ ಬಣಗಳಿಗೆ ಸೂಚಿಸಿದೆ.