Breaking News

ಸರ್ಕಾರದ ಎಚ್ಚರಿಕೆಗೆ ಬಗ್ಗಿದ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಗಳು: ಸೇವಾ ದರದಲ್ಲಿ ಇಳಿಕೆ

Spread the love

ಬೆಂಗಳೂರು: ಸರ್ಕಾರದ ಛಾಟಿಗೆ ಬಗ್ಗಿದ ತಂತ್ರಾಂಶ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಗಳು ಕೊನೆಗೂ ತಮ್ಮ ಆಟೋ ಸೇವಾ ದರಗಳನ್ನು ಇಳಿಕೆ ಮಾಡಿವೆ. ಕರ್ನಾಟಕ ಸರ್ಕಾರವು ತಮ್ಮ ಸೇವೆಯನ್ನು ನಿಲ್ಲಿಸುವಂತೆ ಆದೇಶಿಸಿದ್ದರೂ, ಅಗ್ರಿಗೇಟರ್​ಗಳು ಆಟೋರಿಕ್ಷಾಗಳು ಕನಿಷ್ಠ ದರವನ್ನು ಇಳಿಸಿ ತಮ್ಮ ಸೇವೆಯನ್ನು ಮುಂದುವರೆಸಿವೆ.

ನಿಯಮ ಉಲ್ಲಂಘಿಸಿಲ್ಲ : ಹೆಚ್ಚುವರಿ ದರ ವಿಧಿಸಿ ನಿಯಮ ಉಲ್ಲಂಘಿಸಿರುವ ಆರೋಪವನ್ನು ರಾಪಿಡೊ, ಓಲಾ, ಉಬರ್ ಕಂಪನಿಗಳು ತಳ್ಳಿ ಹಾಕಿವೆ. ಇದೀಗ ಸಾರಿಗೆ ಇಲಾಖೆ ನೋಟಿಸ್ ನೀಡಿದ ಬಳಿಕ ದರಗಳನ್ನು ಕಡಿತಗೊಳಿಸಿವೆ. ಮೂಲ ದರವಾದ 30 ರೂ ಮತ್ತು ನಂತರದ ಪ್ರತೀ ಕಿಮೀಗೆ ರೂ 15 ಎಂದು ವಿಧಿಸಲು ಪ್ರಾರಂಭಿಸಿವೆ.ಮೆಟ್ರೋ ನಿಲ್ದಾಣಗಳಲ್ಲಿ ಪ್ರಿ-ಪೇಯ್ಡ್ ಆಟೋ ಸ್ಟ್ಯಾಂಡ್ ಕುರಿತ ಸ್ಪಷ್ಟನೆ : ಬೆಂಗಳೂರಿನ 10 ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಿ-ಪೇಯ್ಡ್ ಆಟೋ ಸ್ಟ್ಯಾಂಡ್ ಕುರಿತು ಅಗ್ರಿಗೇಟರ್ ಆಟೋರಿಕ್ಷಾ ಸೇವೆಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದ್ದು ಎಲ್ಲದರ ಕುರಿತು ಪರಿಶೀಲಿಸಿ ಸೋಮವಾರ ಅಗ್ರಿಗೇಟರ್ ವಿರುದ್ಧ ಕ್ರಮ ಕೈಗೊಳ್ಳಲು ಯೋಜಿಸಲಾಗಿದೆ ಎಂದಿದೆ.


Spread the love

About Laxminews 24x7

Check Also

ಮಹಿಷ ದಸರಾ | ಯಾರಿಗೂ ತೊಂದರೆ ಆಗದಂತೆ ಮಾಡಿಕೊಳ್ಳಬಹುದು: ಮಹದೇವಪ್ಪ

Spread the love ಮೈಸೂರು: ‘ಯಾರಿಗೂ, ಯಾವ ತೊಂದರೆಯೂ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ