ಕನ್ನಡ ಚಿತ್ರರಂಗ ಕಂಡ ಅಸಾಧಾರಣ ಪ್ರತಿಭೆ, ಕರುನಾಡಿನ ನಮ್ಮೆಲ್ಲರ ಪ್ರೀತಿಯ ನಟ ಪುನೀತ್ ರಾಜ್ ಕುಮಾರ್ ಅಗಲಿ ಒಂದು ವರ್ಷ ಸಮೀಪವಾಗುತ್ತಿದೆ. ದಿನಗಳು ಉರುಳಿದರೂ ಅಪ್ಪು ನೆನಪು ಮಾತ್ರ ಮರೆಯಾಗುತ್ತಿಲ್ಲ. ಕೇವಲ ಕರುನಾಡು ಮಾತ್ರವಲ್ಲ, ದೇಶದ ಮೂಲೆ ಮೂಲೆಯಲ್ಲಿರುವ ಜನರು ಅಪ್ಪು ನೆನೆದು ಇಂದಿಗೂ ಕಣ್ಣೀರು ಹಾಕುತ್ತಿದ್ದಾರೆ.
ಅವರ ಸಾಧನೆಗಳ ಮೂಲಕ, ಸಾಮಾಜಿಕ ಕಾರ್ಯಗಳನ್ನು ಮುಂದುವರೆಸುವ ಮೂಲಕ ಅಪ್ಪು ಅಭಿಮಾನಿಗಳು ಮತ್ತೆ ತಮ್ಮ ನೆಚ್ಚಿನ ನಟನನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.
ಇದೀಗ ತೆಲುಗಿನ ಖ್ಯಾತ ನಟರಾಣಾ ದಗ್ಗುಬಾಟಿತಮ್ಮ ಕಚೇರಿಯಲ್ಲಿ ಅಪ್ಪು ಅವರ ಪುತ್ಥಳಿಯನ್ನು ಇಟ್ಟಿದ್ದಾರೆ. ಪುನೀತ್ ಅವರು ಸ್ನೇಹ ಜೀವಿ ಎಂಬುದನ್ನು ಮತ್ತೆ ಮತ್ತೆ ಉಲ್ಲೇಖಿಸುವ ಅವಶ್ಯಕತೆಯಿಲ್ಲ. ಏಕೆಂದರೆ ಅವರು ಬಾಳಿ ಬದುಕಿದ ರೀತಿಯೇ ಅಂತಹದ್ದು. ಪರಭಾಷೆಯಾಗಲಿ, ಯಾರೇ ಆಗಲಿ ಬಳಿ ಬಂದವರನ್ನು ಆದರದಿಂದ ಪ್ರೀತಿಸುವ ಗುಣ ಅಪ್ಪು ಅವರದ್ದು.
ಇನ್ನು ರಾಣಾ ತಮ್ಮ ಆಫೀಸ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿ ಇದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಅವರು. “ತುಂಬಾ ಸುಂದರವಾದ ಸ್ಮರಣಿಕೆ ನನ್ನ ಕಚೇರಿಗೆ ಬಂದಿದೆ. ಮಿಸ್ ಯೂ ಮೈ ಫ್ರೆಂಡ್ ಪುನೀತ್ ರಾಜ್ ಕುಮಾರ್” ಎಂದು ಬರೆದುಕೊಂಡಿದ್ದಾರೆ.