ನಾಸಿಕ್(ಮಹಾರಾಷ್ಟ್ರ): ನಾಸಿಕ್ಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡು ಮಕ್ಕಳು ಸೇರಿದಂತೆ 14 ಜನರು ಸಜೀವ ದಹನವಾದ ದಾರುಣ ಘಟನೆ ಇಂದು ಬೆಳಗಿನ ಜಾವ 4.30 ರ ಸುಮಾರಿಗೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರ್ಘಟನೆಗೀಡಾದ ಖಾಸಗಿ ಬಸ್ ನಾಸಿಕ್ಗೆ ಪಯಣಿಸುತ್ತಿತ್ತು. ಈ ವೇಳೆ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಪ್ರಯಾಣಿಕರು ನಿದ್ರೆಯಯಲ್ಲಿದ್ದ ಕಾರಣ ಬಸ್ಗೆ ಬೆಂಕಿ ಹೊತ್ತಿಕೊಂಡಿದ್ದು, ಯಾರೂ ಗಮನಿಸಿಲ್ಲ. ಬೆಂಕಿ ಇಡೀ ಬಸ್ಗೆ ಹೊತ್ತಿಕೊಂಡಿದ್ದು, ಜನರು ಹೊರಬರಲಾಗದೇ ಜ್ವಾಲೆಗೆ ಸಿಲುಕಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ಸದ್ಯಕ್ಕೆ 14 ಜನರು ಮೃತಪಟ್ಟ ಬಗ್ಗೆ ಮಾಹಿತಿ ಸಿಕ್ಕಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ಗೆ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂದು ತಿಳಿದು ಬಂದಿಲ್ಲ. ಬೆಂಕಿಯ ಜ್ವಾಲೆಗೆ ಬಸ್ ಸುಟ್ಟು ಕರಕಲಾಗಿದೆ.
Laxmi News 24×7