Breaking News

ಬಿಸಿಯೂಟ ವೆಚ್ಚ ಶೇ.9.6 ಹೆಚ್ಚಳ; 2 ವರ್ಷಗಳ ಬಳಿಕ ಕೇಂದ್ರದ ಕ್ರಮ

Spread the love

ವದೆಹಲಿ: ಎರಡು ವರ್ಷಗಳ ನಂತರ ಕೇಂದ್ರ ಸರ್ಕಾರ ಮಧ್ಯಾಹ್ನದ ಬಿಸಿಯೂಟ ವೆಚ್ಚವನ್ನು ಪ್ರತಿ ಮಗುವಿಗೆ ಶೇ. 9.6ರಷ್ಟು ಹೆಚ್ಚಳ ಮಾಡಿದೆ. ಬಿಸಿಯೂಟಕ್ಕೆ ಸಂಬಂಧಿಸಿದ ಸಮಿತಿಯ ಶಿಫಾರಸ್ಸಿನ ಮೇರೆಗೆ ಕೇಂದ್ರ ಹಣಕಾಸು ಇಲಾಖೆ ಇದಕ್ಕೆ ಅನುಮೋದನೆ ನೀಡಿದೆ.

ಈ ವೆಚ್ಚ ಹೆಚ್ಚಳವೂ ಹಾಲಿ ತಿಂಗಳಿನಿಂದಲೇ ಜಾರಿಗೆ ಬರಲಿದೆ.

ತರಕಾರಿ, ಬೇಳೆಕಾಳುಗಳು ಸೇರಿದಂತೆ ಅಡುಗೆ ಅನಿಲ ದರ ಹೆಚ್ಚಳದ ಹಿನ್ನೆಲೆಯಲ್ಲಿ ಬಿಸಿಯೂಟದ ವೆಚ್ಚವನ್ನು ಹೆಚ್ಚಿಸಬೇಕೆಂದು ಶಾಲಾ ಅಭಿವೃದ್ಧಿ ಸಮಿತಿ ಮತ್ತು ಸಾಮಾಜಿಕ ಕಾರ್ಯಕರ್ತರು ಮನವಿ ಮಾಡಿದ್ದರು. ಕೋರಿಕೆ ಮೇರೆಗೆ ಕೇಂದ್ರ ಸರ್ಕಾರ ಈ ನಿರ್ಣಯ ಕೈಗೊಂಡಿದೆ. ಬಿಸಿಯೂಟ ಯೋಜನೆಯಿಂದ ದೇಶದಲ್ಲಿ ಒಟ್ಟು 11.8 ಕೋಟಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತಿದೆ.

ಈ ಮೊದಲು ಪ್ರತಿ ವಿದ್ಯಾರ್ಥಿಗೆ ಬಿಸಿಯೂಟ ವೆಚ್ಚ ಪ್ರಾಥಮಿಕ ತರಗತಿಗಳಿಗೆ(1ರಿಂದ 5) 4.97 ರೂ. ಇದ್ದದ್ದು, ದರ ಹೆಚ್ಚಳದ ನಂತರ 5.45 ರೂ. ಆಗಿದೆ. ಅದೇ ರೀತಿ ಹಿರಿಯ ಪ್ರಾಥಮಿಕ ತರಗತಿಗಳಿಗೆ(5ರಿಂದ 8) 7.45 ರೂ. ಇದ್ದದ್ದು, ದರ ಹೆಚ್ಚಳದ ನಂತರ 8.17 ರೂ. ಆಗಿದೆ.

ವರ್ಷ ಪ್ರಾಥಮಿಕ ಶಾಲೆ ಹಿರಿಯ ಪ್ರಾಥಮಿಕ ಶಾಲೆ
2010-11 2.69 ರೂ. 4.03 ರೂ.
2022-23 5.45 ರೂ. 8.17 ರೂ.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ