ಬೆಳಗಾವಿ : ಗಾಂಧಿ ಜಯಂತಿ ನಾಡಿನ ಪಿತಾಮಹ ಗಾಂಧಿ ಇಂದು ಇಡೀ ನಮ್ಮ ರಾಷ್ಟ್ರವೇ ಈ ಒಂದು ದಿನವನ್ನ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತೆ .
ಇಂದು ಸುಮಾರು ಜನ ಸುಮಾರು ಕೆಲಸ ಗಳನ್ನಾ ಮಾಡುತ್ತಾರೆ ಆದ್ರೆ ಇಂದು ಸುಮಾರು ಸಮಾಜ ಸೇವೆಗಳನ್ನು ಮಾಡಿದರು ತೆರೆ ಮೇಲೆ ಬರದ ಒಬ್ಬ ವ್ಯಕ್ತಿಯ ಪರಿಚಯ ವನ್ನಾ ಮಾಡಿ ಕೊಡ್ತೇವೆ
ಇಂದು ಕಣಬರಗಿ ಮೂಲದ ಬಸವರಾಜ ಯಳ್ಳೂರು ಕರ ಅವರು ಶಂತಾಯಿ ವೃದ್ಧಾಶ್ರಮ ಕ್ಕೆ ಭೇಟಿ ನೀಡಿ ಅಲ್ಲಿನ ಹಿರಿಯರ ಆಶೀರ್ವಾದ ಪಡೆದು ಅವರಿಗೆ ಬೆಳಿಗ್ಗೆ ಉಪಹಾರ ವ್ಯವಸ್ಥೆ ಮಾಡಿದ್ದಾರೆ.
ಗಾಂಧಿ ಜಯಂತಿ ದಿನ ರಜಾ ಸಿಕ್ಕರೆ ಸಾಕು ಮೋಜು ಮಸ್ತಿ ಮಾಡುವ ಉದ್ಯಮಿ ಹಾಗೂ ಸುಮಾರು ಜನರನ್ನ ನಾವು ನೀವು ನೋಡಿರುತ್ತೇವೆ
ಸಮಾಜದ ಬಗ್ಗೆ ಕಾಳಜಿ ವಹಿಸಿ ಮಾಡುವ ಜನ ಬಹಳ ಕಮ್ಮಿ ಬಸವರಾಜ ಅವರು ಇನ್ನು ಅನೇಕ ಕಾರ್ಯ ಗಳನ್ನ ಮಾಡಿದರು ಕೂಡ ಅವು ಅಷ್ಟರ ಮಟ್ಟಿಗೆ ಬೆಳಕಿಗೆ ಬಂದಿಲ್ಲ ಆದ್ರೆ ಇವತ್ತು ಅವರು ಸ್ನೇಹದ ಬಳಗ ನಮ್ಮ ವಾಹಿನಿಗೆ ಈ ಒಂದು ವಿಡಿಯೋ ಗಳನ್ನ ಹಂಚಿ ಕೊಂಡಿದ್ದಾರೆ.
ಶಾಂತಾಯಿ ವೃದ್ದಾ ಶ್ರಮಕ್ಕೆ ಸಹಜ ವಾಗಿ ಇಡ್ಲಿ ವಡೆ ಕೊಡುವುದು ಮಾಮೂಲಿ.
ಆದ್ರೆ ಬಸವರಾಜ ಅವರು ರೊಟ್ಟಿ ಮತ್ತು ಝುಣಕ ವನ್ನಾ ಅಲ್ಲಿಯ ಜನರಿಗೆ ವಿತರಿಸಿದ್ದಾರೆ.
ಇದರ ಬಗ್ಗೆ ಅಲ್ಲಿನ ವ್ಯವಸ್ಥಾಪಕರು ಮಾತನಾಡಿ ಅವರಿಗೆ ಹಾಗೂ ಅವರ ಸ್ನೇಹ ಬಳಗಕ್ಕೆ ಅಭಿನಂದನೆ ತಿಳಿಸಿದ್ದಾರೆ.
ಇನ್ನು ಯಾರೇ ಅವರಿಗೆ ಆಹಾರ ಸಮರ್ಪಣೆ ಮಾಡಿದರು ಅವರಿಗೆ ಎಲ್ಲ ಹಿರಿಯರು ಪ್ರಾರ್ಥನೆ ಮಾಡಿ ಆಹಾರ ಸೇವಿಸುವುದು ಆ ಒಂದು ಆಶ್ರಮದ ವಾಡಿಕೆ .
ಗಾಂಧಿ ಜಯಂತಿ ದಿನ ತಮ್ಮ ಸಮಯನವನ್ನ ಹಿರಿಯರ ಜೊತೆ ಕಳೆದು ಅವರ್ ಜೊತೆ ಸೇರಿ ಬೆಳಿಗ್ಗಿನ ಉಪಹಾರ ಸೇವಿಸದ ಬಸವರಾಜ ಅವರು ಕೂಡ ಸಂತೋಷ್ ಪಟ್ಟಿದ್ದಾರೆ ಇನ್ನು ಇದೆ ರೀತಿಯ ಅನೇಕ ಸಾಮಾಜಿಕ ಕಾರ್ಯ ಗಳನ್ನ ಮಾಡುವ ಶಕ್ತಿ ಆ ಭಗವಂತ ಬಸವರಾಜ ಅವರಿಗೆ ದೊರಕಿಸಲಿ ಎಂದು ಅಲ್ಲಿಯ ಹಿರಿಯ ಜೀವಗಳ ಜೊತೆ ನಮ್ಮ ವಾಹಿನಿಯ ಆಶಯ ಕೂಡ ಆಗಿದೆ