Breaking News

ನಿಂಗಾನಂದಗೆ ‘ಮಿಸ್ಟರ್‌ ಲಿಂಗರಾಜ’ ಪಟ್ಟ

Spread the love

ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಕ್ರೀಡಾ ವಿಭಾಗ ಹಾಗೂ ಜಿಲ್ಲಾ ದೇಹದಾರ್ಢ್ಯ ಅಸೋಸಿಯೇಷನ್ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ 36ನೇ ‘ಮಿಸ್ಟರ್ ಲಿಂಗರಾಜ’ ಸ್ಪರ್ಧೆ ಗಮನ ಸೆಳೆಯಿತು.

ಸ್ಪರ್ಧೆಯಲ್ಲಿ ಬಿ.ಎ ಪ್ರಥಮ ವರ್ಷದ ನಿಂಗಾನಂದ ಹಿರೇಮಠ ‘ಮಿಸ್ಟರ್ ಲಿಂಗರಾಜ’ ಪ್ರಶಸ್ತಿ ಪಡೆದುಕೊಂಡರು.

ಪ್ರವೀಣ ಕುದರಿಮುತಿ ದ್ವಿತೀಯ, ಅರ್ಪಿತ್‌ ತೋರಗಲ್ ತೃತೀಯ ಸ್ಥಾನ ಪಡೆದರು.

ಸ್ಪರ್ಧೆಯ ನಿರ್ಣಾಯಕರಾಗಿ ಅಂತರರಾಷ್ಟ್ರೀಯ ಖ್ಯಾತಿಯ ಅಜಿತ್ ಸಿದ್ದಣ್ಣವರ, ಜಿಲ್ಲಾ ದೇಹದಾರ್ಢ್ಯ ಅಸೋಸಿಯೇಷನ್‍ ಅಧ್ಯಕ್ಷ ಎಂ.ಕೆ.ಗುರವ್, ಕಾರ್ಯದರ್ಶಿ ಗಂಗಾಧರ ಎಂ., ತರಬೇತುದಾರ ಹೇಮಂತ್ ಹವಲ್ ಹಾಗೂ ಸುನಿಲ್ ರಾವುತ್ ಕಾರ್ಯನಿರ್ವಹಿಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಎಚ್.ಎಸ್.ಮೇಲಿನಮನಿ ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು.


Spread the love

About Laxminews 24x7

Check Also

ತುಮಕೂರು: ಮುಂಬೈ ಮಾದರಿ ಗಣಪತಿ ವಿಗ್ರಹಗಳಿಗೆ ಹೆಚ್ಚು ಬೇಡಿಕೆ

Spread the loveತುಮಕೂರು: 2025ರ ಚೌತಿ ಬಂದೇ ಬಿಡ್ತು. ಭಕ್ತರು ವಿಭಿನ್ನ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಮುಂಬೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ