ದಾವಣಗೆರೆ: ರೀಲ್ಸ್ (Reels) ಮಾಡಲು ಹೋಗಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ (Davangere) ಜಿಲ್ಲೆ ಹರಗನಹಳ್ಳಿ ಚೆಕ್ ಡ್ಯಾಂ ಬಳಿ ನಡೆದಿದೆ.
ಮೃತರನ್ನು ಹರಿಹರದ ಆಶ್ರಯ ಬಡಾವಣೆ ಪವನ್ (25), ಪ್ರಕಾಶ್ (24) ಎಂದು ಗುರುತಿಸಲಾಗಿದೆ. ಇವರಿಬ್ಬರು ಸ್ನೇಹಿತರಾಗಿದ್ದು, ರೀಲ್ಸ್ ಮಾಡಲು ಹೋಗಿ ನೀರಲ್ಲಿ ಬಿದ್ದ ಪ್ರಕಾಶ್ ನನ್ನು ರಕ್ಷಿಸಲು ಹೋಗಿ ಪವನ್ ಸಹ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.