ರಾಮನಗರ: ನಾನು ಬ್ಲ್ಯಾಕ್ ಇದ್ದೇನೆ, ಆದರೆ ಬ್ಲ್ಯಾಕ್ ಮೇಲರ್ (Blackmail) ಅಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD KumaraSwamy) ತಿಳಿಸಿದ್ದಾರೆ.
ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ (CP Yogeshwar) ಕಾರಿಗೆ ಜೆಡಿಎಸ್ (JDS) ಕಾರ್ಯಕರ್ತರಿಂದು ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದ್ದರು. ಚನ್ನಪಟ್ಟಣದ ಭೈರಾಪಟ್ಟಣ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ನಾನು ಬ್ಲ್ಯಾಕ್ ಇದ್ದೇನೆ, ಆದರೆ ಬ್ಲ್ಯಾಕ್ ಮೇಲರ್ ಅಲ್ಲ. ನಿಮಗೆ ಹಾಗೆ ಅನಿಸಿದ್ರೆ ನನಗೆ ಗೊತ್ತಿಲ್ಲ. ನೀವೇನೋ ಮಾಡಿಕೊಂಡಿರಬೇಕು. ನಾವು ಬೇರೆ ಜಿಲ್ಲೆಯ ಗುಂಡಾಗಳನ್ನು ಕರೆಯಿಸಿ ಪ್ರತಿಭಟನೆ (Protest) ಮಾಡಿಲ್ಲ. ನನ್ನ ಪಕ್ಷದಲ್ಲಿ ಇರೋರು ಗುಂಡಾಗಳಲ್ಲ, ರಾಮನಗರ ಜಿಲ್ಲೆ ಅಷ್ಟು ಅನಾಥ ಆಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.