Breaking News

ಹಣಕ್ಕೆ ಬೇಡಿಕೆಯಿಟ್ಟಿದ್ದಲ್ಲದೆ, ತನ್ನೊಂದಿಗೆ ಮಲಗುವಂತೆ ಕೇಳಿದ ಆರೋಪ: ಮಂಜು ಪಾವಗಡ ಸಹೋದನಿಗೆ ಥಳಿತ

Spread the love

ತುಮಕೂರು: ಪತ್ರಕರ್ತನ ಸೋಗಿನಲ್ಲಿ ತುಮಕೂರು ಪಾಲಿಕೆ ಸಿಬ್ಬಂದಿಗೆ ಹಣಕ್ಕಾಗಿ ಬೇಡಿಕೆಯಿಟ್ಟು, ಬೆದರಿಕೆಯೊಡ್ಡಿದ್ದ ಆರೋಪದಡಿಯಲ್ಲಿ ಬಿಗ್‌ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರ ಪ್ರದೀಪ್ ಪಾವಗಡ ಹಾಗೂ ಮೂವರು ಯುವತಿಯರು ಸೇರಿದಂತೆ ಒಟ್ಟು ನಾಲ್ವರನ್ನು ತುಮಕೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

 

ಪ್ರದೀಪ್​ ಪಾವಗಡ ತಾನೊಬ್ಬ ಸತ್ಯ ವಿಸ್ಮಯ ವಾರ ಪತ್ರಿಕೆ ಸಂಪಾದಕ ಎಂದು ಹೇಳಿಕೊಂಡಿದ್ದ ಮತ್ತು ತುಮಕೂರು ಮಹಾನಗರ ಪಾಲಿಕೆ ನಲ್ಮ್ ವಿಭಾಗದ ಸಿಬ್ಬಂದಿ ದೀಪಿಕಾಗೆ ಪರಿಚಯವಾಗಿದ್ದ. ಸಂಘ, ಸಂಸ್ಥೆ ಹೆಸರಲ್ಲಿ 10 ಲಕ್ಷ ಸಾಲ ಪಡೆಯುವ ಸೋಗಿನಲ್ಲಿ ಪಾಲಿಕೆ ಸಿಬ್ಬಂದಿಗೆ ಪರಿಚಯವಾಗಿದ್ದ. ಈ ವೇಳೆ 10 ಲಕ್ಷ ರೂ. ಸಾಲ ಕೊಡಿಸುವುದಾಗಿ ದೀಪಿಕಾ ಅವರು ಒಪ್ಪಿಕೊಂಡಿದ್ದರು.

10 ಲಕ್ಷ ರೂ. ಸಾಲ‌ ಕೊಡಿಸಲು 4 ಲಕ್ಷ ಕಮಿಷನ್ ಹಣ ಕೊಡಬೇಕೇಂದು ದೀಪಿಕಾ, ಪ್ರದೀಪ್ ಪಾವಗಡಗೆ ಬೇಡಿಕೆ ಇಟ್ಟಿದ್ದರು. ಇದನ್ನೆ ಬಂಡವಾಳ ಮಾಡಿಕೊಂಡ ಪ್ರದೀಪ್, ದೀಪಿಕಾ ಮೊಬೈಲ್​​ನಲ್ಲಿ ಮಾತನಾಡಿದ್ದ ಆಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದ. ಇದೇ ಆಡಿಯೋ ಇಟ್ಟುಕೊಂಡು ಪಾಲಿಕೆ ಸಿಬ್ಬಂದಿ ದೀಪಿಕಾಗೆ 4 ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದ.

ತನ್ನ ಬಳಿಯಿದ್ದ ಮೂವರು ಯುವತಿಯರನ್ನು ಬಿಟ್ಟು, ನಾವು ಆರ್​ಟಿಐ ಕಾರ್ಯಕರ್ತರು ನೀವು ಹಣ ಕೊಟ್ಟಿಲ್ಲ ಅಂದ್ರೆ, ನಿಮ್ಮನ್ನ ಕೆಲಸದಿಂದ ವಜಾಗೊಳಿಸುವಂತೆ ಮಾಡುತ್ತೇವೆ ಎಂದು 4 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಹಣ ಕೊಡಲಿಲ್ಲ ಅಂದ್ರೆ ತನ್ನ ಪತ್ರಿಕೆಯಲ್ಲಿ ಸುದ್ದಿ ಬಿತ್ತರಿಸೋದಾಗಿ ಬೆದರಿಕೆ ಹಾಕಿದ್ದರು. ಅಲ್ಲದೇ ತನ್ನ ಜೊತೆ ಒಂದು ರಾತ್ರಿ ಕಳೆಯುವಂತೆ ಆ ಸಿಬ್ಬಂದಿಗೆ ಬೆದರಿಕೆ ಇಟ್ಟಿರುವ ಆರೋಪ ಪ್ರದೀಪ್​ ಪಾವಗಡ ವಿರುದ್ಧ ಕೇಳಿಬಂದಿದೆ.


Spread the love

About Laxminews 24x7

Check Also

ಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದ 14 ನೇ ಪುಣ್ಯಸ್ಮರಣೆ 7 ಬಾರಿ ಸಂಸದರಾಗಿ ಮಾಡಿದ ಕಾರ್ಯ ಅಮೂಲ್ಯ – ಸಚಿವ ಸತೀಶ್ ಜಾರಕಿಹೊಳಿ

Spread the loveಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದ 14 ನೇ ಪುಣ್ಯಸ್ಮರಣೆ 7 ಬಾರಿ ಸಂಸದರಾಗಿ ಮಾಡಿದ ಕಾರ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ