ಅಥಣಿ: ಮನೆಯಲ್ಲಿ ಜಾರಿಬಿದ್ದು ಗಂಭೀರವಾಗಿ ಗಾಯಗೊಂಡ ಯುವಕನ ಮೆದುಳು ನಿಷ್ಕ್ರೀಯಗೊಂಡ ಹಿನ್ನೆಲೆ, ಕುಟುಂಬಸ್ಥರು ಯುವಕನ ಅಂಗಾಂಗ ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಮಂಗಳವಾರ ಪ್ರಶಾಂತ ವಿಠ್ಠಲ ಮಲ್ಲೆವಾಡಿ ಎನ್ನುವ 30 ವರ್ಷದ ಯುವಕ ಮನೆಯಲ್ಲಿ ಶೌಚಾಲಯಕ್ಕೆ ಹೋಗಿ ಮರಳಿ ಬರುವಾಗ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಪೋಷಕರು ಅಥಣಿಯ ಅನ್ನಪೂರ್ಣ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಕೋಮಾಗೆ ತಲುಪಿದ್ದ ಆತ ಎಷ್ಟೇ ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳಲಿಲ್ಲ. ಅಲ್ಲದೇ ಆತನ ಮಿದುಳು ಕೂಡ ನಿಷ್ಕ್ರಿಯಗೊಂಡಿದ್ದನ್ನು ವೈದ್ಯರು ದೃಢಪಡಿಸಿದ್ದರು.
Laxmi News 24×7