Breaking News

ನಕಲಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಆರು ಮಂದಿ ಬಂಧನ

Spread the love

ಬೆಂಗಳೂರು: ಅಕ್ರಮವಾಗಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ 6 ಜನರ ಗ್ಯಾಂಗ್​ವೊಂದನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರವೀಣ್, ರಮೇಶ್, ನಾಗರಾಜ್, ಸುನೀಲ್, ಡಿ ರೂಪಂ, ಭಟ್ಟಾಚಾರ್ಯ ಹಾಗೂ ರವಿ ಬಂಧಿತರು.

ಪ್ರವೀಣ್ ಮೊಬೈಲ್ ಸೆಂಟರ್ ನಡೆಸುತ್ತಿದ್ದ ಆರೋಪಿ. ಈತ ಆಧಾರ್ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿಟ್ಟುಕೊಳ್ಳುತ್ತಿದ್ದ. ಆಧಾರ್ ಬೇಕಿರುವವರ ಮಾಹಿತಿ‌ ಪಡೆದು ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸುತ್ತಿದ್ದ. ಎರಡನೇ ಆರೋಪಿ ರಮೇಶ್ ಆಟೋ ಚಾಲಕ. ಈತ ಪ್ರವೀಣ್ ಕಳಿಸುತ್ತಿದ್ದ ಅರ್ಜಿದಾರನನ್ನ ಗೆಜೆಟೆಡ್ ಆಫೀಸರ್ ಬಳಿ‌ ಕರೆದೊಯ್ಯುತ್ತಿದ್ದ. ಮತ್ತೋರ್ವ ಆರೋಪಿ ಸುನಿಲ್.ಡಿ, ಈತ ಪ್ರೈಮರಿ ಹೆಲ್ತ್ ಸೆಂಟರ್​​​ನ ನಿವೃತ್ತ ವೈದ್ಯ. ನಿವೃತ್ತಿ ನಂತರವೂ ಗೆಜೆಟೆಡ್ ಸೀಲ್​ನ್ನು ತನ್ನ ಬಳಿ‌ ಇಟ್ಟುಕೊಂಡಿದ್ದ. ಪ್ರವೀಣ್ ಕಳಿಸುವವರ ಅಪ್ಲಿಕೇಶನ್ ಪಡೆದು ಸೀಲ್ ಸಹಿ‌ ಹಾಕಿ ಕೊಡುತ್ತಿದ್ದ.

ನಾಗರಾಜ್ ಖಾಸಗಿ ಬ್ಯಾಂಕ್ ಉದ್ಯೋಗಿ, ಅಧಿಕೃತವಾಗಿ ಆಧಾರ್ ಪಡೆಯಲು ಬೇಕಿರುವ ಈ ಸ್ಕ್ಯಾನರ್ ದುರ್ಬಳಕೆ ಮಾಡಿಕೊಳ್ತಿದ್ದ. ಸ್ಕ್ಯಾನ್ ಮಾಡಿ ನಕಲಿ ದಾಖಲಾತಿಗಳ ಸಹಿತ ಆಧಾರ್ ಫಾರ್ಮ್ ಅಪ್‌ಲೋಡ್ ಮಾಡುತ್ತಿದ್ದ. 5ನೇ ಆರೋಪಿ ರೂಪಂ ಭಟ್ಟಾಚಾರ್ಜಿ,ಈತ ಓರಿಸ್ಸಾ ಮೂಲದವನು.

ಗಾರ್ಮೆಂಟ್ಸ್​ನಲ್ಲಿ ಸೂಪರ್ವೈಸರ್ ಕೆಲಸ ಮಾಡಿಕೊಂಡಿದ್ದ. ಸಂಬಳ ಪಡೆಯಲು ಕಡ್ಡಾಯವಾಗಿರುವುದರಿಂದ ಆಧಾರ್ ಬೇಕಿರುವವರನ್ನ ಪ್ರವೀಣ್​ಗೆ ರೆಫರ್ ಮಾಡುತ್ತಿದ್ದ. ಇನ್ನು ರವಿ ಸರ್ಕಾರಿ ಆಸ್ಪತ್ರೆಯ ಉದ್ಯೋಗಿ, ಆಧಾರ್ ಅಗತ್ಯವಿರುವವರನ್ನ ಪ್ರವೀಣ್ ಬಳಿ ಕಳಿಸಿಕೊಡ್ತಿದ್ದ. ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಸಾಮಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಬೊಮ್ಮನಹಳ್ಳಿ ಪೊಲೀಸರು, ಎಲ್ಲರನ್ನು ಬಂಧಿಸಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ತಿಳಿಸಿದ್ದಾರೆ.


Spread the love

About Laxminews 24x7

Check Also

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು

Spread the love ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ