Breaking News

7 ಸಾಹಿತಿಗಳ ಪಠ್ಯಗಳನ್ನು ಕೈಬಿಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆ

Spread the love

ಬೆಂಗಳೂರು: ರೋಹಿತ್ ಚಕ್ರತೀರ್ಥ (Rohit Chakratirtha) ಸಮಿತಿ ಮಾಡಿಕೊಟ್ಟಿದ್ದ ಪಠ್ಯ ಪರಿಷ್ಕರಣೆಯನ್ನು ಖಂಡಿಸಿ ನಾಡಿನ ಹಲವು ಪ್ರಗತಿಪರ ಚಿಂತಕರು ಪಠ್ಯವಾಪ್ಸಿ ಚಳುವಳಿ ನಡೆಸಿದ್ದರು. ಸರ್ಕಾರಕ್ಕೆ ಪತ್ರ ಬರೆದು ತಮ್ಮ ಪಠ್ಯ/ಪದ್ಯವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು. ಇದಕ್ಕೆ ಸರ್ಕಾರ ಇದೀಗ ತಡವಾಗಿ ಸ್ಪಂದಿಸಿದೆ.

ಶೈಕ್ಷಣಿಕ ವರ್ಷದಲ್ಲಿ (Academic Year) ಅರ್ಧ ಭಾಗ ಮುಗಿದ ಬಳಿಕ ಇದೀಗ 7 ಸಾಹಿತಿಗಳ ಪಠ್ಯಗಳನ್ನು ಹಿಂಪಡೆದಿರುವುದಾಗಿ ಪ್ರಕಟಿಸಿದೆ. 10ನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿದ್ದ ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ, ಡಾ.ಜಿ ರಾಮಕೃಷ್ಣ ಅವರ ಭಗತ್ ಸಿಂಗ್ ಪಾಠ, ಈರಪ್ಪ ಕಂಬಳಿ ಅವರ ಹೀಗೊಂದು ಟಾಪ್ ಪಯಣ, ಸತೀಶ್ ಕುಲಕರ್ಣಿಯ ಕಟ್ಟುತ್ತೇವೆ ನಾವು ಪದ್ಯ, ಸುಕನ್ಯ ಮಾರುತಿ ಅವರ ಏಣಿ ಪದ್ಯವನ್ನು ಕೈಬಿಡಲಾಗಿದೆ. 

9ನೇ ತರಗತಿಯಲ್ಲಿದ್ದ ರೂಪಾ ಹಾಸನ ಅವರ ಅಮ್ಮನಾಗುವುದೆಂದರೇ ಪದ್ಯ, 6ನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿದ್ದ ದೊಡ್ಡಹುಲ್ಲೂರು ರುಕ್ಕೋಜಿರಾವ್ ಅವರ ಡಾ. ರಾಜಕುಮಾರ್ ಗದ್ಯವನ್ನು ಕೈಬಿಡಲಾಗಿದೆ. 7 ಸಾಹಿತಿಗಳ ಪಠ್ಯಗಳನ್ನು ಬೋಧನೆ ಮಾಡದಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ