Breaking News

ವಿಜಯಪುರದಲ್ಲಿ ಜನಸ್ನೇಹಿ ಪೊಲೀಸ್ ಠಾಣೆ!

Spread the love

ವಿಜಯಪುರ: ಸಾಮಾನ್ಯವಾಗಿ ಪೊಲೀಸ್ ಠಾಣೆ ಅಂದಾಕ್ಷಣ ಕಣ್ಮುಂದೆ ಬರೋದು ಠಾಣೆ ಮುಂದೆ ನಿಂತ ನಾಲ್ಕಾರು ಹಳೆ ವಾಹನಗಳು, ಬಣ್ಣ ಮಾಸಿದ ಗೋಡೆ, ಗಿಡ ಗಂಟಿಗಳು ಬೆಳೆದು ನಿಂತ ಇಕ್ಕಟ್ಟಾದ ಪ್ರದೇಶ. ಇಂತಹ ಠಾಣೆಗಳಿಗೆ ಜನ ಬರುವುದಕ್ಕೂ ಹಿಂದೆ ಮುಂದೆ ನೋಡುವ ಇಂದಿನ ದಿನಗಳಲ್ಲಿ ಜಿಲ್ಲೆಯ ಆದರ್ಶ ನಗರ ಪೊಲೀಸ್ ಠಾಣೆ ಸಾಕಷ್ಟು ಡಿಫರೆಂಟ್ ಆಗಿ ಜನ ಸಾಮಾನ್ಯರನ್ನ ಆಕರ್ಷಿಸುತ್ತಿದೆ.

ಮಾತ್ರವಲ್ಲದೇ ಬಂದಂತಹ ಜನಸಾಮಾನ್ಯರಿಗೆ ಪೊಲೀಸ್ ವ್ಯವಸ್ಥೆ ಕುರಿತು ಅಗತ್ಯ ಮಾಹಿತಿ ಒದಗಿಸುವ ಮೂಲಕ ಜನಸ್ನೇಹಿಯಾಗಿ ರೂಪು ಗೊಂಡಿದೆ. ಠಾಣೆಯ ಪಿಎಸ್​​​​ಐ ಪರಿಸರ ಪ್ರೇಮದಿಂದ ಈ ರೀತಿಯ ವಾತಾವರಣ ನಿರ್ಮಾಣವಾಗಿದೆ‌. ಈ ಪೊಲೀಸ್ ಠಾಣೆ ಪರಿಸರ ಸ್ನೇಹಿ ಜೊತೆಗೆ ಜನಸ್ನೇಹಿ ಯಾಗಿದೆ.

ಪೊಲೀಸ್ ಠಾಣೆ ಗೋಡೆ ಮೇಲೆ ಪೊಲೀಸ್ ವ್ಯವಸ್ಥೆ ಕುರಿತು ಅಗತ್ಯ ಮಾಹಿತಿ ನೀಡುವ ಆಕರ್ಷಕ ಚಿತ್ರಗಳು. ಮತ್ತೊಂದೆಡೆ ಠಾಣೆ ಎದುರು ವಿಶಾಲವಾದ ಜಾಗದಲ್ಲಿ ಹಸಿರು ವನ. ವನದಲ್ಲಿ ಪಕ್ಷಿಗಳ ಗೂಡು, ಕುಡಿಯುವ ನೀರು ಕಾಳುಗಳನ್ನು ಹಾಕಲು ವ್ಯವಸ್ಥೆ ಮಾಡಲಾಗಿದೆ. ‘ಜನಸ್ನೇಹಿ ಪೊಲೀಸ್’ ಪರಿಕಲ್ಪನೆಯಲ್ಲಿ ಆದರ್ಶ ನಗರ ಠಾಣೆ ಹೊಸ ರೂಪ ಪಡೆದುಕೊಂಡಿದೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ