Breaking News

ಕೆಎಸ್​ಆರ್​​ಟಿಸಿ ಬಸ್​, ಬೈಕ್ ಮಧ್ಯೆ ಭೀಕರ ಅಪಘಾತ; ಸವಾರರಿಬ್ಬರೂ ಸಾವು..

Spread the love

ಬಾಗಲಕೋಟೆ: ಕೆಎಸ್‌ಆರ್​ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರೂ ಸಾವಿಗೀಡಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.

ಬೈಕ್ ಸವಾರರಾದ ಶ್ರೀನಿವಾಸ ಹಂಸನೂರು (32), ಈಶ್ವರ ಮಾಚಕನೂರು (54) ಸಾವಿಗೀಡಾದವರು.

ಬಾಗಲಕೋಟೆ ತಾಲೂಕಿನ ಸೀಗಿಕೇರಿ ಕ್ರಾಸ್​​ನಲ್ಲಿ ಈ ಅಪಘಾತ ಸಂಭವಿಸಿದೆ. ಕೆಎಸ್​ಆರ್​​ಟಿಸಿ ಬಸ್​ ಮುದ್ದೇಬಿಹಾಳದಿಂದ‌ ಬಾಗಲಕೋಟೆ ಮಾರ್ಗವಾಗಿ ಸಂಚರಿಸುತ್ತಿದ್ದು, ಬೈಕ್ ಸವಾರರು ಬಾಗಲಕೋಟೆಯಿಂದ ಸೀಗಿಕೇರಿ ಕಡೆಗೆ ಸಾಗುತ್ತಿದ್ದರು.

ಅಪಘಾತದಲ್ಲಿ ಶ್ರೀನಿವಾಸ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಂಭೀರ ಗಾಯಗೊಂಡ ಈಶ್ವರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ


Spread the love

About Laxminews 24x7

Check Also

2028ರ ಸಾರ್ವತ್ರಿಕ ಚುನಾವಣೆಗೆ ಈ ಬಾಗಲಕೋಟೆ ಉಪ ಚುನಾವಣೆ ಶ್ರೀಕಾರ : ಶರಣು ತಳ್ಳಿಕೇರಿ

Spread the loveಬಾಗಲಕೋಟೆ ಉಪಚುನಾವಣೆ : ಬಿಜೆಪಿಯಿಂದ ಚುನಾವಣಾ ಪೂರ್ವ ಕಾರ್ಯಾಗಾರ ಬಾಗಲಕೋಟೆ: ಹಿಂದೂ ವಿರೋಧಿ ಕಾಂಗ್ರೆಸ್ಸ ಸರಕಾರವನ್ನು ಕಿತ್ತೊಗೆಯಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ