Breaking News

3 ವರ್ಷ ಡೇಟಿಂಗ್, ಮದ್ವೆಯಾಗಿ 2 ವಾರ – ವಿಚ್ಛೇದನಕ್ಕೆ ಮುಂದಾದ ಪೂನಂ ಪಾಂಡೆ

Spread the love

ನವದೆಹಲಿ: ಮದುವೆಯಾದ ಎರಡು ವಾರದಲ್ಲೇ ಪತಿ ವಿರುದ್ಧ ದೂರು ನೀಡಿದ್ದ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಇದೀಗ ವಿಚ್ಛೇದನ ನೀಡಲು ಮುಂದಾಗಿದ್ದಾರೆ.

ಪತಿ ಸ್ಯಾಮ್ ಬಾಂಬೆ ತನಗೆ ಕಿರುಕುಳ ನೀಡಿ ಬೆದರಿಕೆ ಹಾಕುತ್ತಾನೆ ಎಂದು ಹೇಳಿ ನಟಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಹೀಗಾಗಿ ಗೋವಾ ಪೊಲೀಸರು ಸ್ಯಾಮ್ ನನ್ನು ಬಂಧಿಸಿದ್ದರು.

ಸ್ಯಾಮ್ ಹಾಗೂ ಪೂನಂ ಸೆಪ್ಟೆಂಬರ್ 10ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದಕ್ಕೂ ಮೊದಲು ಇವರಿಬ್ಬರು ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಪತಿಯ ಕಿರುಕುಳದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಪೂನಂ, ನಮ್ಮಿಬ್ಬರ ಸಂಬಂಧ ನಿಂದನೀಯವಾಗಿದೆ. ಅಲ್ಲದೆ ಆತ ತನಗೆ ಪ್ರಾಣಿಗಳಿಗೆ ಹೊಡೆದಂತೆ ಹೊಡೆಯುತ್ತಿದ್ದು, ಆತನ ಜೊತೆ ಸಂಸಾರ ಮಾಡಲು ಸಾಧ್ಯವಿಲ್ಲ. ಇಂತಹ ವ್ಯಕ್ತಿಯೊಂದಿಗೆ ಸಂಬಂಧ ಮುಂದುವರಿಸುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ನಮ್ಮ ಮಧ್ಯೆ ಆಗುತ್ತಿರುವ ಜಗಳ ತಾರಕ್ಕೇರಿತ್ತು. ಈ ವೇಳೆ ಆತ ನನಗೆ ಹೊಡೆಯಲು ಆರಂಭಿಸಿದನು. ನನ್ನನ್ನು ಉಸಿರುಗಟ್ಟುವಂತೆ ಮಾಡಿದ್ದು, ನಾನು ಸಾಯುತ್ತೇನೆ ಅಂತ ಭಾವಿಸಿದ್ದೆ. ನನ್ನ ಮುಖಕ್ಕೆ ಹೊಡೆದು, ಕೂದಲು ಹಿಡಿದು ಎಳೆದಾಡಿದನು. ಅಲ್ಲದೆ ತಲೆ ಹಿಡಿದು ಹಾಸಿಗೆಯ ಮೂಲೆಗೆ ಹೊಡೆದನು ಎಂದು ಪೂನಂ ದೂರಿದ್ದಾರೆ.

ಇಷ್ಟು ಮಾತ್ರವಲ್ಲದೇ ಆತ ನನ್ನ ದೇಹದ ಮೇಲೆ ಮಂಡಿಯೂರಿ, ನನ್ನ ಮೇಲೆ ಹಲ್ಲೆ ಮಾಡಿದನು. ಈ ವೇಳೆ ನಾನು ಆತನ ಕೈಯಿಂದ ತಪ್ಪಿಸಿಕೊಂಡು ಕೋಣೆಯಿಂದ ಹೊರಬಂದು ಪಾರಾದೆ ಎಂದಿದ್ದಾರೆ. ಡೇಟ್ ನಲ್ಲಿದ್ದ ವೇಳೆಯೂ ಕಿರುಕುಳ ನೀಡುತ್ತಿದ್ದ ಸ್ಯಾಮ್, ಮದುವೆಯಾದ ಬಳಿಕ ಆತನ ಜೊತೆಗಿನ ಸಂಬಂಧ ಸುಧಾರಿಸಬಹುದು ಎಂದು ನಂಬಿದ್ದೆ. ಹೀಗಾಗಿ ನಾನು ಆತನನ್ನು ಮದುವೆಯಾದೆ. ಆದರೆ ಆತ ಬದಲಾಗಿಲ್ಲ. ಪ್ರೀತಿ ಕುರುಡು ಎಂಬುದಕ್ಕೆ ನಾನು ಅತ್ಯುತ್ತಮ ಉದಾಹರಣೆ ಎಂದು ಪೂನಂ ಅಳಲು ತೋಡಿಕೊಂಡಿದ್ದಾರೆ.


Spread the love

About Laxminews 24x7

Check Also

ಸವದಿ ಬಿಜೆಪಿಯಲ್ಲಿದ್ದರೆ ದೊಡ್ಡ ಲೀಡರ್ ಆಗುತ್ತಿದ್ದ, ಆದರೀಗ ನಮ್ಮ ಪೀಡಾ ಹೋಗಿದೆ: ರಮೇಶ್ ಜಾರಕಿಹೊಳಿ

Spread the loveಸವದಿ ಬಿಜೆಪಿಯಲ್ಲಿದ್ದರೆ ದೊಡ್ಡ ಲೀಡರ್ ಆಗುತ್ತಿದ್ದ, ಆದರೀಗ ನಮ್ಮ ಪೀಡಾ ಹೋಗಿದೆ: ರಮೇಶ್ ಜಾರಕಿಹೊಳಿ ಚಿಕ್ಕೋಡಿ, ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ