ಮೈಸೂರು : ”ಇದೇ ಮೊದಲು ದೈವಿಭಕ್ತಿ ಹೊಂದಿರುವ ರಾಷ್ಟ್ರಪತಿಗಳು ದಸರಾಗೆ ಬರುತ್ತಿದ್ದಾರೆ.ಪೂರ್ವ ತಯಾರಿ ಬಗ್ಗೆ ಮಾತನಾಡಲು ನಾನು ಬಂದಿದ್ದೇನೆ”ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೋಮವಾರ ಹೇಳಿಕೆ ನೀಡಿದ್ದಾರೆ.
ಮೈಸೂರು ಜನರಲ್ಲಿ ವಿಶೇಷ ನಿವೇದನೆ ಮಾಡಿದ ಜೋಶಿ ಅವರು, ”ಮೈಸೂರಿಗರು ಬಹುದೊಡ್ಡ ಸಂಖ್ಯೆಯಲ್ಲಿ ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಬನ್ನಿ. ರಾಷ್ಟ್ರಪತಿಗಳಿಗೆ ಹುಬ್ಬಳ್ಳಿಯಲ್ಲಿ ಪೌರ ಸನ್ಮಾನ ಮಾಡಲಾಗುವುದು” ಎಂದರು.
ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಕಾಂಗ್ರೆಸ್‌ನವರು ಭ್ರಮೆಯಲ್ಲಿದ್ದಾರೆ ಅದಕ್ಕೆ ನಾವು ಏಕೆ ಬೇಡ ಅನ್ನೋಣ ?ಕಾಂಗ್ರೆಸ್ ಅನ್ನು ಭ್ರಮೆಯಲ್ಲಿ ಇರಲು ಮಾಧ್ಯಮದವರು ಬಿಡಿ. ಇಷ್ಟು ದಿನ ಜನರನ್ನು ಭ್ರಮೆಯಲ್ಲಿಟ್ಟಿದ್ದರು ಈಗ ಅವರು ಭ್ರಮೆಯಲ್ಲಿದ್ದಾರೆ. ಭಾರತ್ ಜೋಡೋ” ಯಾತ್ರೆ ರಾಜಕೀಯ ಲಾಭ ಕ್ಕಾಗಿ ಮಾಡಲಾಗುತ್ತಿದೆ.ಕಾಂಗ್ರೆಸ್ ಏನು ಮಾಡುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ.ಮುಂದಿನ ಚುನಾವಣೆಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಕಾಂಗ್ರೆಸ್ ಎಂದಿಗೂ ದೇಶಕ್ಕಾಗಿ ವಿಚಾರ ಮಾಡಿಲ್ಲ. ನಕಲಿ ಗಾಂಧಿ ಕುಟುಂಬದವರು ಅವರ ಕುಟುಂಬದ ಬಗ್ಗೆ ಯೋಚನೆ ಮಾಡುತ್ತಾರೆ. ದೇಶದ ಬಗ್ಗೆ ಅವರಿಗೆ ಏನು ಗೊತ್ತು” ಎಂದು ಪ್ರಶ್ನಿಸಿದರು.
ಜೈಲಿನ ಬಗ್ಗೆ ರಾಹುಲ್ ಗಾಂಧಿ ಅವರು ಡಿಕೆ ಶಿವಕುಮಾರ್ ಅವರು ಮಾಹಿತಿ ಪಡೆದ ವಿಚಾರಕ್ಕೆ ಸಮಬಂಧಿಸಿ ಪ್ರತಿಕ್ರಿಯಿಸಿ, ”ಯಾರು ತಪ್ಪು ಮಾಡಿರುತ್ತಾರೆ ಅವರಿಗೆ ಭಯವಿರುತ್ತದೆ.ಅಂತವರು ಜೈಲಿನ ಬಗ್ಗೆ ವಿಚಾರಿಸುತ್ತಾರೆ. ನಾನಾಗಲಿ, ಪ್ರತಾಪ್ ಸಿಂಹ ಆಗಲಿ ಈ ಬಗ್ಗೆ ವಿಚಾರಿಸುವುದಿಲ್ಲ” ಎಂದರು.
Laxmi News 24×7