Breaking News

75 ಯೂನಿಟ್ ಉಚಿತ ವಿದ್ಯುತ್ ವಿತರಣೆಯ ಯೋಜನೆಯನ್ನು ಹಿಂಪಡೆದಿಲ್ಲ: ಸಿಎಂ

Spread the love

ಬೆಂಗಳೂರು: ಬಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 75 ಯೂನಿಟ್ ಉಚಿತ ವಿದ್ಯುತ್ ವಿತರಣೆಯ ಯೋಜನೆಯನ್ನು ಹಿಂಪಡೆದಿಲ್ಲ. ಇನ್ನಷ್ಟು ಸರಳೀಕರಣ ಮಾಡಿ, ಇದೇ ತಿಂಗಳಿನಿಂದ ಹಣ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಪರಿಶ್ರಮದಿಂದ ದುಡಿಯುವ ವರ್ಗ: ಇಂದು ಕರ್ನಾಟಕ ಭೋವಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಸ್ಮಾ ದೇವಿ ಮಂದಿರದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಉದ್ಘಾಟನೆ ಹಾಗೂ 43ನೇ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಿಎಂ ಪಾಲ್ಗೊಂಡರು.

ಬಳಿಕ ಮಾತನಾಡಿದ ಅವರು, ಬಿಸಿಲು, ಗಾಳಿ, ಮಳೆ ಎನ್ನದೇ ಬಹಳ ಕಠಿಣ ಪರಿಶ್ರಮದಿಂದ ದುಡಿಯುವುದು ಈ ಭೋವಿ ಸಮಾಜದ ಮೂಲ ಗುಣ. ಭೋವಿ ಸಮಾಜದೊಂದಿಗೆ ನಮ್ಮದು‌ 30 ವರ್ಷದ ಸಂಬಂಧವಿದೆ.‌ ನಮ್ಮ ತಂದೆಯವರೊಂದಿಗೆ ಈ ಸಮಾಜ ಅನೋನ್ಯವಾಗಿತ್ತು. ಹುಬ್ಬಳ್ಳಿಯಲ್ಲಿ ಜಿ.ಎಸ್ ಬಿಳಗಿಯವರು, ಶಿವಮೊಗ್ಗದಲ್ಲಿ ಜಿ ಬಸವಣ್ಣಪ್ಪ ಮಂತ್ರಿಯಾಗಿದ್ದರು. ಇವರು ನಮ್ಮ ತಂದೆಯವರೊಂದಿಗೆ ಅತ್ಯಂತ ನಿಕಟ ಒಡನಾಟ ಹೊಂದಿದ್ದರು ಎಂದು ಸ್ಮರಿಸಿದರು.


Spread the love

About Laxminews 24x7

Check Also

ಸಚಿವ ತಿಮ್ಮಾಪುರ ವಜಾ ಮಾಡದಿದ್ದರೆ ಸಿಎಂಗೆ 85% ಕಮಿಷನ್ ಹೋಗಿದೆ ಎಂದರ್ಥ: ಆರ್. ಅಶೋಕ್

Spread the loveಬೆಂಗಳೂರು: ಸಿದ್ದರಾಮಯ್ಯನವರ ನಿದ್ದೆ ಸರ್ಕಾರ ಇದು. ಭ್ರಷ್ಟಾಚಾರದ ಹೊಳೆಯಲ್ಲಿ ಮಿಂದು ಮೇಯುತ್ತಿದೆ. ಅಬಕಾರಿ ಸಚಿವ ತಿಮ್ಮಾಪುರ ಅವರನ್ನು ವಜಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ