ಪೂಜೆ, ಭಜನೆ ಮಾಡುವುದು ಬಿಟ್ಟು ಬೇರೆ ಹೆಚ್ಚಿಗೆ ಏನೂ ಬಿಜೆಪಿ ಅವರಿಗೆ ಗೊತ್ತಿಲ್ಲ. ದೇಶದ ಇತಿಹಾಸವನ್ನು ಮೊದಲು ಇವರು ತಿಳಿದುಕೊಳ್ಳಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲೇವಡಿ ಮಾಡಿದ್ದಾರೆ.
ಇಂಡಿಯಾ ಪಾಕಿಸ್ತಾನ ಇಬ್ಬಾಗ ಮಾಡಿದ್ದ ಕಾಂಗ್ರೆಸ್‍ನವರು ಇದೀಗ ಭಾರತ್ ಜೋಡೋ ಮಾಡ್ತಿದ್ದಾರೆ ಎಂಬ ಬಿಜೆಪಿ ಟೀಕೆಗೆ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ ಸತೀಶ ಜಾರಕಿಹೊಳಿ ಅದು ಕಾಂಗ್ರೆಸ್ ಮಾಡಿದ್ದಲ್ಲ, ಬ್ರಿಟಿಷರೇ ಮಾಡಿದ್ದು. ಈ ಇತಿಹಾಸ ಅವರಿಗೆ ಗೊತ್ತಿಲ್ಲ. ಅದನ್ನು ಒಪ್ಪುವ ಅನಿವಾರ್ಯತೆ ಅಂದು ಎಲ್ಲರಿಗೂ ಇತ್ತು.
ಬಾಂಗ್ಲಾ ದೇಶ ಪಾಕಿಸ್ತಾನ ಅಂಗವಾಗಿತ್ತು. ಅಲ್ಲಿ ಬಹಳಷ್ಟು ಅತ್ಯಾಚಾರ ನಡೆಯುತ್ತಿತ್ತು. ಅದನ್ನು ತಪ್ಪಿಸಲು ಪಾಕಿಸ್ತಾನದಿಂದ ಬಾಂಗ್ಲಾ ದೇಶವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಪ್ರತ್ಯೇಕ ಮಾಡಿದರು. ಇದಕ್ಕೆ ಇವರು ಖುಷಿ ಪಡಬೇಕು ಎಂದು ತಿರುಗೇಟು ಕೊಟ್ಟರು.
ಇನ್ನು 40 ಪರ್ಸೆಂಟ್ ಭ್ರಷ್ಟಾಚಾರದ ಬಗ್ಗೆ ಹೈದರಾಬಾದ್‍ನಲ್ಲಿ ಪೋಸ್ಟರ್ ಹಚ್ಚಿದ್ದಾರೆ. ಇವರು ಬೆಂಗಳೂರಿಗಷ್ಟೇ ಫೇಮಸ್ ಆಗಿಲ್ಲ. ನಿನ್ನೆ ಹೈದರಾಬಾದ್‍ಗೆ ಸಿಎಂ ಬೊಮ್ಮಾಯಿ ಹೋದಾಗ ಅಲ್ಲಿ ಟಿಆರ್‍ಎಸ್‍ನವರು 40 ಪರ್ಸೆಂಟ್ ಸರ್ಕಾರದ ಸಿಎಂ ನಮ್ಮ ರಾಜ್ಯಕ್ಕೆ ಬರುತ್ತಿದ್ದಾರೆ ಸ್ವಾಗತ ಎಂದಿದ್ದಾರೆ.
40 ಪರ್ಸೆಂಟ್ ಹೋಗಿರುವುದು ಇಡೀ ದೇಶದಲ್ಲಿಯೇ ದಾಖಲೆಯಾಗಿದೆ, ಗಿನ್ನಿಸ್ ದಾಖಲೆಯಲ್ಲಿ ಬರಬೇಕು ಎಂದು ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು