Breaking News

ಪಿಎಸ್​​ಐ ನೇಮಕಾತಿ ಅಕ್ರಮ‌ ಆರೋಪಿ ನಿವಾಸದ ಬಳಿ ತಮಟೆ ಬಾರಿಸಿ ನೋಟಿಸ್ ಅಂಟಿಸಿದ ಸಿಐಡಿ ಅಧಿಕಾರಿಗಳು

Spread the love

ಬೆಂಗಳೂರು: ಪಿಎಸ್​​ಐ ನೇಮಕಾತಿ ಅಕ್ರಮ‌ ಪ್ರಕರಣದಲ್ಲಿ 36ನೇ ಆರೋಪಿ ಸಿದ್ದರಾಜು ಸದ್ಯ ಅರೆಸ್ಟ್ ಆಗಿದ್ದಾರೆ. ಇವರು ಪಿಎಸ್​​ಐ ಹಗರಣದಲ್ಲಿ ಮಧ್ಯವರ್ತಿಯಾಗಿದ್ದರು ಎನ್ನಲಾಗ್ತಿದೆ. ಪಿಎಸ್​​ಐಯಾಗಿ ಆಯ್ಕೆಯಾಗಿದ್ದ ಗಜೇಂದ್ರ, ಮನೋಜ್​​ಗೆ ಮಧ್ಯವರ್ತಿಯಾಗಿದ್ದ ಸಿದ್ದರಾಜು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಳೆದ ಐದು ತಿಂಗಳಿನಿಂದ ತಲೆಮರೆಸಿಕೊಂಡಿದ್ದರು.

ಹೀಗಾಗಿ ಆರೋಪಿಯ ಲಗ್ಗೆರೆ ನಿವಾಸದ ಬಳಿ ತಮಟೆ ಬಾರಿಸಿ ನೋಟಿಸ್ ಅಂಟಿಸಿದ ಸಿಐಡಿ ಅಧಿಕಾರಿಗಳು ಆರೋಪಿಯ ಕುರಿತು ಮಾಹಿತಿ ನೀಡುವಂತೆ ಪ್ರಚಾರ ಮಾಡಿದ್ದರು. ಕೋರ್ಟ್​ನಿಂದ ಆರೋಪಿ ಪತ್ತೆಗೆ ಜಾಮೀನು ರಹಿತ ವಾರೆಂಟ್ ಕೂಡ ತರಲಾಗಿತ್ತು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.ಆರೋಪಿ ಸಿದ್ದರಾಜು ಲಗ್ಗೆರೆ ನಿವಾಸದ ಟಿವಿ, ಫ್ರಿಡ್ಜ್​, ಸೋಫಾ, ಕಾರು ಹಾಗೂ ಬೈಕ್ ಸೇರಿ ಚರಾಸ್ತಿ ವಶಕ್ಕೆ ಪಡೆಯಲು ಮುಂದಾಗಿತ್ತು. ಈ ಹಿನ್ನೆಲೆ ನಿನ್ನೆ ಸಿದ್ದರಾಜು ಕೋರ್ಟ್​ಗೆ ನೇರವಾಗಿ ಶರಣಾಗಿದ್ದಾನೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ