ಅರಭಾವಿಯ ಅಕ್ಷಯ್ ದುಂಡಪ್ಪ ಭಂಡಾರಿ, ಬಿರಣಗಡ್ಡಿಯ ಬಸವರಾಜ ರುದ್ರಪ್ಪ ದುಂದನಟ್ಟಿ, ರಾಜಾಪುರದ ಶ್ರೀಧರ ಲಕ್ಕಪ್ಪ ಕಟ್ಟಿಕಾರ್ ಬಂಧಿತ ಆರೋಪಿಗಳು.
ಆರೋಪಿ ಅಕ್ಷಯ್ ಭಂಡಾರಿ ಬೆಂಗಳೂರಿನಿಂದ ಇಲೆಕ್ಟ್ರಾನಿಕ್ ಡಿವೈಸ್ ತಂದು ಸಂಜು ಭಂಡಾರಿ ಈತನಿಗೆ ಕೊಟ್ಟಿದ್ದು ಹಾಗೂ ಇಲೆಕ್ಟ್ರಾನಿಕ್ ಡಿವೈಸ್‍ಗಳನ್ನು ಮಾಡಿಪಾಯಿ ಮಾಡಿದ್ದಾರೆ.
![]()
ಈತನಿಂದ ಒಂದು ಮೊಬೈಲ್ ಮತ್ತು 50 ಖಾಲಿ ಇಲೆಕ್ಟ್ರಾನಿಕ್ ಡಿವೈಸ್ ಮತ್ತು 18 ಮಾಡಿಪಾಯಿ ಮಾಡಿದ ಇಲೆಕ್ಟ್ರಾನಿಕ್ ಡಿವೈಸ್ ಜಪ್ತಿ ಮಾಡಲಾಗಿದೆ.
ಆರೋಪಿ ಬಸವರಾಜ ರುದ್ರಪ್ಪ ದುಂದನಟ್ಟಿ ಶಿರಹಟ್ಟಿಯಲ್ಲಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಹೇಳಿದವನು. ಈತನಿಂದ ಒಂದು ಮೊಬೈಲ್ ಮತ್ತು ಒಂದು ಮೋಟಾರ್ ಸೈಕಲ್ ಜಪ್ತಿ ಮಾಡಲಾಗಿದೆ.
ಶ್ರೀಧರ ಲಕ್ಕಪ್ಪ ಕಟ್ಟಿಕಾರ್ ವಿದ್ಯಾರ್ಥಿಗಳಿಗೆ ಇಲೆಕ್ಟ್ರಾನಿಕ್ ಡಿವೈಸ್ ಕೊಟ್ಟವನು. ಈತನಿಂದ ಒಂದು ಮೊಬೈಲ್ ಜಪ್ತಿ ಮಾಡಲಾಗಿದೆ. ಸಧ್ಯ ಮೂರು ಜನ ಅರೋಪಿತರು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ.
Laxmi News 24×7