ಬೆಳಗಾವಿಯ ಆರ್‍ಟಿಓ ಸರ್ಕಲ್ ಬಳಿ ಮರ ಬಿದ್ದು ಯುವಕನ ಬಲಿ ಪಡೆದ ಬೆನ್ನಲ್ಲಿಯೇ ಮತ್ತೊಂದು ಮರ ಬಿದ್ದಿರುವ ಘಟನೆ ನಡೆದಿದೆ. ಈ ವೇಳೆ ಹಲವು ವಾಹನಗಳು ಜಖಂಗೊಂಡಿವೆ.
ಬೆಳಗಾವಿಯ ಮಾರ್ಕೆಟ್ ಪೆÇಲೀಸ್ ಠಾಣೆ ಹಾಗೂ ಅರಣ್ಯ ಇಲಾಖೆ ಕಚೇರಿ ಬಳಿಯೇ ಬೃಹದಾಕಾರದ ಮರ ಉರುಳಿ ಇನ್ನೊವಾ ವಾಹನ ಸೇರಿದಂತೆ ಇತರ ವಾಹನಗಳು ಜಖಂಗೊಂಡಿವೆ. ಎರಡು ರಿಕ್ಷಾ ಹಾಗೂ ಒಂದು ಇನ್ನೊವಾ ವಾಹನ ಮರದ ಬುಡದಲ್ಲಿ ಸಿಲುಕಿವೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮರದ ಟೊಂಗೆಗಳನ್ನು ತೆರವುಗೊಳಿಸುವ ಕೆಲಸ ಮಾಡಿದರು.
ಇದೇ ವೇಳೆ ರೀಕ್ಷಾ ಚಾಲಕ ಮುನ್ನಾ ನಮ್ಮ ಇನ್‍ನ್ಯೂಸ್ ಜೊತೆಗೆ ಮಾತನಾಡಿ ರಸ್ತೆ ಪಕ್ಕ ರೀಕ್ಷಾ ನಿಲ್ಲಿಸುತ್ತಿದ್ದೆ, ಆಗ ಮರ ಬೀಳುವ ಸೌಂಡ್ ಕೇಳಿಸಿತು. ತಕ್ಷಣವೇ ರೀಕ್ಷಾ ಬಿಟ್ಟು ಜಿಗಿದೆ. ಹೀಗಾಗಿ ನನ್ನ ಜೀವ ಉಳಿತು. ನನ್ನ ರೀಕ್ಷಾಗೆ ಸಂಪೂರ್ಣವಾಗಿ ಹಾನಿಯಾಗಿದೆ. ಸರ್ಕಾರ ನನಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.ಬೆಳಗಾವಿ ನಗರದ ರಸ್ತೆ ಬದಿಯ ಅತ್ಯಂತ ಹಳೆಯ ಮರಗಳು ಬಿದ್ದು ಸಾವು ನೋವು ಸಂಭವಿಸುತ್ತಿವೆ.
ಈ ಹಳೆಯ ಮರಗಳನ್ನು ಗುರುತಿಸಿ ಕೆಡವಲು ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕಾಗಿದೆ. ಬೆಳಗಾವಿ ಮಹಾನಗರ ರಸ್ತೆಗಳ ಬದಿಗೆ ನೂರಾರು ವರ್ಷಗಳಷ್ಟು ಹಳೆಯದಾದ ಮರಗಳಿವೆ. ಇವುಗಳನ್ನು ಗುರುತಿಸಲು ಪಾಲಿಕೆಯು ಅರಣ್ಯ ಇಲಾಖೆಗೆ ಸೂಚಿಸಿದರೆ ಮಾತ್ರ ಅರಣ್ಯ ಇಲಾಖೆಯು ಈ ಕೆಲಸ ಮಾಡಲು ಸಾಧ್ಯ.