ಕಳೆದ ಭಾನುವಾರ ವರುದಕ್ಷಣೆ ತರುವಂತೆ ಒತಾಯಿಸಿ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವಿವಾಹಿತೆ ರೇಣುಕಾಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಹುಲ್ಲಿಯಾನೂರು ಗ್ರಾಮಸ್ಥರು ಬುಧವಾರ ಪೆÇಲೀಸ್ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹೌದು ಕಳೆದ ಭಾನುವಾರ ಕಾಕತಿ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ನವ ವಿವಾಹಿತೆ ರೇಣುಕಾ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿರುವ ಪತಿಯ ಕುಟುಂಬ ಹಾಗೂ ಪ್ರಭಾವಿ ಬಿಜೆಪಿ ಮುಖಂಡರ ಅಣತೆಗೆ ಕುಣಿಯುತ್ತಿರುವ ಕಾಕತಿ ಸಿಪಿಐ ಗುರುನಾಥ ಹಾಗೂ ಎಸಿಪಿ ವಿರುದ್ಧ ಹುಲ್ಲಿಯಾನೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ನಗರಪೊಲೀಸ್ ಆಯುಕ್ತರ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಗ್ರಾಮಸ್ಥರು ಧರಣಿಯನ್ನು ನಡೆಸಿ ನ್ಯಾಯಕೊಡಿಸುವಂತೆ ಆಗ್ರಹಿಸಿದರು.
ಇನ್ನು ಪ್ರಕರಣ ಸಂಬಂಧ ಪೊಲೀಸರು ಸೋಮವಾರ ಪ್ರಕರಣದ 2ನೇ ಆರೋಪಿಯನ್ನು ಕಾಕತಿ ಪೆÇಲೀಸರು ವಶಕ್ಕೆ ಪಡೆದುಕೊಂಡರು. ಬಿಜೆಪಿ ನಾಯಕ ಮಾರುತಿ ಅಷ್ಟಗಿ, ಹಾಗೂ ಸಂಸದ ಆಪ್ತ ಸಹಾಯಕನ ಮಾತು ಕೇಳಿ ಆತನ ಮೇಲೆ ಕ್ರಮ ಕೈಗೊಳ್ಳುವ ಬದಲಾಗಿ ಪೊಲೀಸರು ಬಿಜೆಪಿ ಮುಖಂಡನ ಕಾರಿನಲ್ಲಿ ಕಳುಹಿಸಿ ಕೊಟ್ಟಿದ್ದು ಹುಲ್ಲಿಯಾನೂರು ಗ್ರಾಮಸ್ಥರು ಕಾಕತಿ ಸಿಪಿಐ ಮೇಲೆ ಈ ವೇಳೆ ಕೆಂಡ ಕಾರಿದರು.ನನ್ನ ಮಗಳಿಗೆ ಗಂಡನ ಮನೆಯವರು ಕೊಡಬಾರದ ಹಿಂಸೆ ಕೊಡುತ್ತಿದ್ದರು. ದೀಪಾವಳಿ ವೇಳೆಗೆ ಅವಳ ಗಂಡನಿಗೆ ಕೊಡಬೇಕಾಗಿದ್ದನ್ನು ಕೊಟ್ಟು ಬಿಡುವುದಾಗಿ ನಮ್ಮ ಹಿರಿಯರು ರಾಜಿ ಮಾಡಿಸಿದ್ದರು. ಅಷ್ಟರಲ್ಲಿ ಅವಳ ಗಂಡನ ಮನೆಯವರು ನನ್ನ ಮಗಳನ್ನು ಬಾಳ್ವೆ ಮಾಡಲು ಬಿಡದೇ, ಈ ರೀತಿ ಕೊಂದು ಹಾಕಿದ್ದಾರೆ ಎಂದು ರೇಣುಕಾಳ ತಾಯಿ ಅಳಲನ್ನು ತೋಡಿಕೊಂಡರು.