ಅಕ್ಟೋಬರ್ 9 ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮನಿಸಲಾಯಿತು.
ಬೆಳಗಾವಿ ಜಿಲ್ಲೆಯಲ್ಲಿ ಪ್ರತೀವರ್ಷ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡುತ್ತಾ ಬಂದಿದ್ದಾರೆ. ಆದರೆ ಕಳೆದ ಮೂರು ವರ್ಷಗಳಿಂದ ಈ ಆಚರಣೆಗೆ ಕೋವಿಡ್‍ನಿಂದಾಗಿ ಬ್ರೇಕ್ ಹಾಕಲಾಗಿತ್ತು. ಆದರೆ ಈ ಬಾರಿ ಎಲ್ಲಾ ಸಮುದಾಯಗಳ ಮುಖಂಡರು ಅದ್ಧೂರಿಯಾಗಿ ಆಚರಣೆ ಮಾಡಲು ನಿರ್ಧಾರ ಮಾಡಿದ್ದಾರೆ. ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿರವರ ನೇತೃತ್ವದಲ್ಲಿ ಈ ಕುರಿತು ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಸಮುದಾಯ ಮುಖಂಡರು, ಈ ಬಾರಿಯ ವಾಲ್ಮೀಕಿ ಜಯಂತಿಯನ್ನು ಜಿಲ್ಲಾಡಳಿತದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಿ ಅದ್ಧೂರಿ ಆಚರಣೆ ಮಾಡಬೇಕು. ಮತ್ತು ಎರಡು ದಿನಗಳ ಮೊದಲು ವಾಲ್ಮೀಕಿ ಜಯಂತಿ ನಿಮಿತ್ಯ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
ನಗರದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಬ್ಯಾನರ್ ಹಾಗೂ ಕಟೌಟ್‍ಗಳನ್ನು ಹಾಕಬೇಕು. ನಮ್ಮ ಸಮಾಜದ ಸ್ವಾಮಿಜಿಗಳು ಮೀಸಲಾತಿಗಾಗಿ ಆಗ್ರಹಿಸಿ ಉಪವಾಸ ಮಾಡುತ್ತಿದ್ದಾರೆ. ಈ ವೇಳೆಗಾಗಲೇ ಸರಕಾರ ಮೀಸಲಾತಿಯನ್ನು ಘೋಷಣೆ ಮಾಡದಿದ್ದರೆ ನಾವೆಲ್ಲಾ ನಾಯಕರು ಸ್ವಾಮಿಜಿಯವರೊಂದಿಗೆ ಹೋರಾಟದಲ್ಲಿ ಭಾಗಿಯಾಗುತ್ತೇವೆ ಎಂದರು.ಈ ವೇಳೆ ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಡಾ. ರುದ್ರೇಶ ಘಾಳಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ, ಜಿಲ್ಲಾ ವಾಲ್ಮೀಕಿ ಸಂಘಟನೆಯ ಅಧ್ಯಕ್ಷ ರಾಜಶೇಖರ್ ತಳವಾರ್, ದಿನೇಶ ಬಾಗಡೆ, ಗೌತಮ್ ಪಾಟೀಲ್, ಸುರೇಶ ಗೋವಣ್ಣವರ್, ಮಲ್ಲೇಶ ಚೌಗಲೆ, ಯಲ್ಲಪ್ಪಾ ನಾಯಿಕ್, ವಿಜಯ್ ತಳವಾರ್, ಪಾಂಡುರಂಗ ನಾಯಿಕ್, ಸಂಜಯ್ ನಾಯಿಕ್ ಸೇರಿ ಸಮಾಜದ ಜನತೆ ಹಾಗೂ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.