ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ಜರುಗುತ್ತಿದ್ದ ಗಣಹೋಮವು ಈ ವರ್ಷ ಎಂಎಲ್ಸಿ ಪ್ರಕಾಶ ಹುಕ್ಕೇರಿಯವರ ಸಹೋದರ ಕೇದಾರಿ ಹುಕ್ಕೇರಿ ನಿಧನ ಹೊಂದಿದ ಹಿನ್ನಲೆಯಲ್ಲಿ ಈ ಬಾರಿ ಸರಳವಾಗಿ ಗಣಹೋಮ ಜರುಗಿತು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಹನುಮಾನ ಗಣೇಶ ಮಂಡಳ ವತಿಯಿಂದ ಶಾಸಕ ಗಣೇಶ ಹುಕ್ಕೇರಿ ಹಾಗೂ ಎಂಎಲ್ಸಿ ಪ್ರಕಾಶ ಹುಕ್ಕೇರಿ ನೇತೃತ್ವದಲ್ಲಿ ಪ್ರತಿವರ್ಷ ಗಣಹೋಮ ಅದ್ದೂರಿಯಾಗಿ ಜರಗುತಿತ್ತ.
ಆದರೆ ಈ ಬಾರಿ ಪ್ರಕಾಶ ಹುಕ್ಕೇರಿ ಸಹೋದರ ಕೇದಾರಿ ಹುಕ್ಕೇರಿ ನಿಧನರಾದ ಹಿನ್ನಲೆಯಲ್ಲಿ ಸರಳವಾಗಿ ಗಣಹೋಮ ಜರುಗಿತು.ಹನುಮಾನ ಮಂದಿರದಲ್ಲಿ ಗಣಹೋಮ ಹಾಗೂ ಧಾರ್ಮಿಕ ಪೂಜಾವಿಧಿಗಳು ಜರುಗಿದವು.
ನರಸಿಂಹವಾಡಿ ಅರ್ಚಕರಿಂದ ಗಣಹೋಮ ಜರುಗಿತು.ಶಾಸಕ ಗಣೇಶ ಹುಕ್ಕೇರಿ ಅವರ ಧರ್ಮಪತ್ನಿ ಸ್ವಪ್ನಾಲಿ ಹುಕ್ಕೇರಿಯವರು ಗಣಹೋಮವನ್ನು ನೇರವರಿಸಿಕೊಟ್ಟರು.