ಬೆಳಗಾವಿ ಜಿಲ್ಲೆಯಾಧ್ಯಂತ ಸಂಚಾರಿ ನಿಯಮಗಳ ಕುರಿತು ವಾಹನ ಸವಾರರಿಗೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.
ರಸ್ತೆ ಸುರಕ್ಷತಾ ಸಪ್ತಾಹ ನಿಮಿತ್ಯ ನಿಪ್ಪಾಣಿಯ ಅಶೋಕ ನಗರದ ಎಸ್‍ಬಿಐ ಬ್ಯಾಂಕ್ ಬಳಿ, ಅಥಣಿ ಪಟ್ಟಣ, ಗೋಕಾಕ್ ಪಟ್ಟಣ ಸೇರಿ ಇನ್ನಿತರ ಕಡೆಗಳಲ್ಲಿ ಆಯಾ ಠಾಣೆಗಳ ಪೊಲೀಸರು ಸಂಚಾರಿ ನಿಯಮಗಳ ಕುರಿತು ಆಟೋ ಚಾಲಕರು, ಟ್ಯಾಕ್ಸಿ ಚಾಲಕರು,
ಬೈಕ್ ಸವಾರರು ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು.ಈ ನಿಯಮಗಳನ್ನು ಪಾಲನೆ ಮಾಡಿದ್ರೆ ಯಾವುದೇ ರೀತಿ ಅಪಘಾತಗಳು ಸಂಭವಿಸುವುದಿಲ್ಲ. ನಿಮ್ಮ ಜೀವ ಅತ್ಯಮೂಲ್ಯವಾಗಿದೆ ಎಂದು ಅರಿವು ಮೂಡಿಸಿದರು.