ಬೆಳಗಾವಿ ನಗರದ ರೈಲು ನಿಲ್ದಾಣದಲ್ಲಿ ಆಗುತ್ತಿರುವ ವಿವಿಧ ಹಂತಗಳ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಲು ಸಂಸದೆ ಮಂಗಳಾ ಅಂಗಡಿ ರವರು ಬೆಳಗಾವಿಯ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೌದು ಬೆಳಗಾವಿಯ ರೈಲು ನಿಲ್ದಾಣ ಕಾಮಗಾರಿಯು ನಡೆದಿರುವ ಸ್ಥಳಕ್ಕೆ ಇಂದು ಮಂಗಳವಾರ ಭೇಟಿ ನೀಡಿದ ಸಂಸದೆ ಮಂಗಳಾ ಅಂಗಡಿರವರು ಇಂದು ಮಂಗಳವಾರ ರೈಲು ನಿಲ್ದಾಣದಲ್ಲಿ ಮಾಡಲಾಗುತ್ತಿರುವ ವಿವಿಧ ಕಾಮಗಾರಿಗಳನ್ನು ಕುರಿತಂತೆ ಪರಿಶೀಲನೆ ನಡೆಸಿದರು.
ಮುಖ್ಯ ಪ್ರವೇಶ ದ್ವಾರದ ಮೂಲಕ ನಡೆಸಲಾಗುತ್ತಿರುವ ಜಿ+3 ಅಂತಸ್ತಿನ ಕಟ್ಟಡ, ಎಲಿವೇಟರ್ ಅಳವಡಿಕೆ, ವಾಹನ ನಿಲುಗಡೆ ವ್ಯವಸ್ಥೆ, ನಾಲ್ಕು ಪ್ಲಾಟ್ ಫಾರ್ಮಗಳ ಸುಧಾರಣಾ ಕಾಮಗಾರಿ, ಕೋಚಿಂಗ್ ಡಿಪೋ ಪಿಟ್ ಲೈನ್ ನಿರ್ಮಾಣ, ಹೀಗೆ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಸ್ಥಿತಿಗತಿಯ ಬಗ್ಗೆ ವೀಕ್ಷಣೆ ಮಾಡಿ ಮಾಹಿತಿಯನ್ನು ಪಡೆದುಕೊಂಡರು.ಈ ವೇಳೆ ರೈಲು ಹಾಗೂ ನಿಲ್ದಾಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ವೇಳೆ ರೈಲಿಗಾಗಿ ಕಾಯುತ್ತ ಕುಳಿತಿದ್ದ ಪ್ರಯಾಣಿಕರಿಂದ ಮಾಹಿತಿಯನ್ನು ಪಡೆದುಕೊಂಡು ನಂತರ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದರು.