ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಜನಸ್ಪಂದನ ಸಮಾವೇಶದಲ್ಲಿ ಸಚಿವ ಎಂಟಿಬಿ ನಾಗರಾಜ್ ಮತ್ತು ಬಿಡಿಎ ಅಧ್ಯಕ್ಷ ವಿಶ್ವನಾಥ್ ಡಾನ್ಸ್ ಮಾಡುವ ಮೂಲಕ ಸಭಿಕರನ್ನು ರಂಜಿಸಿದರು.
ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ವೇದಿಕೆಗೆ ಆಗಮಿಸಿದ ಎಂಟಿಬಿ ನಾಗರಾಜ್, ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ…’ ಹಾಡಿಗೆ ಕುಣಿದು ಕುಪ್ಪಳಿಸಿದರು.
ನಾಗರಾಜ್ಗೆ ಸಾಥ್ ಕೊಟ್ಟ ಬಿಡಿಎ ಅಧ್ಯಕ್ಷ ವಿಶ್ವನಾಥ್ ಕೂಡ ಮಸ್ತ್ ಸ್ಟೆಪ್ ಹಾಕಿದರು. ಇವರಿಬ್ಬರ ಡಾನ್ಸ್ ನೋಡಿ ಸಭಿಕರು ಕುಳಿತಲ್ಲೇ ಶಿಳ್ಳೆ ಹಾಕಿ ಚಪ್ಪಾಳೆಯ ಸುರಿಮಳೆಗೈದರು. ಹಲವರು ನಿಂತಲ್ಲೇ ಡಾನ್ಸ್ ಮಾಡಿ ಖುಷಿಪಟ್ಟರು.
ಇನ್ನು ಜನಸ್ಪಂದನ ಸಮಾವೇಶಕ್ಕೆ ಬಸ್ನಲ್ಲಿ ಆಗಮಿಸಿದ ಯುವಕರ ಪೈಕಿ ಕೆಲವರು ದೇವನಹಳ್ಳಿ- ದೊಡ್ಡಬಳ್ಳಾಪುರ ರಸ್ತೆಯಲ್ಲಿ ನಿಂತಿದ್ದ ಬಸ್ನ ಮೇಲೇರಿ ಡಾನ್ಸ್ ಮಾಡಿರುವ ವಿಡಿಯೋ ಕೂಡ ವೈರಲ್ ಆಗಿದೆ.
Laxmi News 24×7