ಬೆಂಗಳೂರು: ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಮೂಲಕ ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಹಾಗೂ ಅಂತ್ಯೋದ್ಯಮ ಕಾರ್ಡ್‌ದಾರರು ಪ್ರತಿ ತಿಂಗಳು ಪಡಿತರ ಪಡೆಯುವ ಸಂದರ್ಭ ಒಮ್ಮೆ ಬೆರಳಚ್ಚು ನೀಡಿ ಒಟಿಪಿ ಕೊಡುತ್ತಿದ್ದರು.
ಆದರೆ, ಇನ್ನು ಮುಂದೆ ಸೆಪ್ಟೆಂಬರ್ ತಿಂಗಳಿಂದ ಎರೆಡೆರೆಡು ಬಾರಿ ಬೆರಳಚ್ಚು ನೀಡಿ, ಎರಡು ಒಟಿಪಿ ನೀಡಬೇಕು.
ಸೆ. ತಿಂಗಳ ಪಡಿತರ ವಿತರಣೆ ಪ್ರಕ್ರಿಯೆ ಶುರುವಾಗಲಿದೆ. ಎಲ್ಲರೂ ಎರೆಡೆರಡು ಬಾರಿ ಬೆರಳಚ್ಚು ಒಟಿಪಿ ನೀಡಬೇಕಾಗಿದೆ. ಹಾಗಾಗಿ ಇದರಿಂದ ಕಿರಿಕಿರಿಯೂ ಆಗಬಹುದು ಸರ್ವರ್ ಸಮಸ್ಯೆ ಕೂಡ ಉಂಟಾಗಬಹುದು. ಆದರೆ, ಎರಡು ಬಾರಿ ಒಟಿಪಿ, ಬೆರಳಚ್ಚು ಮಾತ್ರ ನೀಡಲೇಬೇಕು. ಇದರಿಂದ ವಿಳಂಬ ಕೂಡಾ ಆಗಬಹುದು. ಆದರೆ ಈ ವಿಧಾನ ಅನುಸರಿಲೇ ಬೇಕು.
ಈ ಹಿಂದೆ ಎಷ್ಟು ಅಕ್ಕಿ ಸಿಗುತ್ತಿತ್ತೋ ಅಷ್ಟೇ ಅಕ್ಕಿ ಎಲ್ಲರಿಗೂ ಸಿಗಲಿದೆ. ಅಕ್ಕಿ ಅಥವಾ ಆಹಾರ ಧಾನ್ಯದ ಹಂಚಿಕೆಯ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಈ ಸಂಬಂಧ ಏನೇ ಮಾಹಿತಿಗೂ ಸಾರ್ವಜನಿಕರು ೧೯೬೭ ಅಥವಾ ೧೪೪೪೫ ಕರೆ ಮಾಡಮಾಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Laxmi News 24×7