ಚೆನ್ನೈ: ಧಾರಾವಾಹಿ ನಟಿ ವಿ.ಜೆ. ಮಹಾಲಕ್ಷ್ಮೀ ಮತ್ತು ತಮಿಳು ನಿರ್ಮಾಪಕ ರವೀಂದರ್ ತಮ್ಮ ಪ್ರೇಮ ವಿವಾಹದಿಂದಲೇ ಇತ್ತೀಚೆಗೆ ಭಾರಿ ಸುದ್ದಿಯಾದರು. ಅಲ್ಲದೆ, ಕಳೆದ ದಿನಗಳಿಂದ ಈ ಜೋಡಿ ಟ್ರೆಂಡಿಂಗ್ನಲ್ಲಿದೆ. ಅದಕ್ಕೆ ಕಾರಣ ನಟಿ ಮತ್ತು ನಿರ್ಮಾಪಕ ನಡುವಿನ ವ್ಯತ್ಯಾಸ.
ಅದೇನೆಂದರೆ, ಮಹಾಲಕ್ಷ್ಮೀ ಸೌಂದರ್ಯವತಿಯಾಗಿದ್ದು, ಆಕೆ ಮದುವೆ ಆಗಿರುವ ರವೀಂದರ್ ದಡೂತಿ ಮನುಷ್ಯ. ಹೀಗಾಗಿ ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಿಕ್ಕಾಪಟ್ಟೆ ಟ್ರೋಲ್ ಸಹ ಆಯಿತು.
ಮಹಾಲಕ್ಷ್ಮೀ ಮತ್ತು ರವಿಂದರ್ ಇಬ್ಬರು ತಿರುಪತಿಯಲ್ಲಿ ಸೆ.1ರಂದು ಮದುವೆ ಆದರು. ಇಬ್ಬರಿಗೂ ಇದು ಎರಡನೇ ಮದುವೆ ಆಗಿದ್ದು, ಮಹಾಬಲಿಪುರಂನಲ್ಲಿ ಇಬ್ಬರು ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ. ಮಾಧ್ಯಮ ಸಂದರ್ಶನದಲ್ಲಿ ಇಬ್ಬರ ಆಪ್ತಪೆಯನ್ನು ಕಂಡು ನೆಟ್ಟಿಗರು ಅಚ್ಚರಿಯ ಜೊತೆಗೆ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಇಬ್ಬರ ವಿಚಾರದಲ್ಲಿ ಬಂದಿರುವ ತಾಜಾ ಸುದ್ದಿಯೇನೆಂದರೆ, ಮಹಾಲಕ್ಷ್ಮೀಗೆ ರವೀಂದರ್ ಅವರು ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.