ಬೆಂಗಳೂರು: ದಿನವಿಡೀ ಕಾದು ಯತ್ನಿಸಿದರೂ ಕನ್ನ ಹಾಕುವ ಪ್ಲಾನ್ ವಿಫಲವಾಗಿದ್ದಕ್ಕೆ ಸಿಟ್ಟಿಗೆದ್ದ ಕಳ್ಳನೊಬ್ಬ ಸಿಕ್ಕ ಸಿಕ್ಕ ವಸ್ತುಗಳನ್ನು ಕಿತ್ತೆಸೆದು ಪರಾರಿಯಾಗಿದ್ದಾನೆ. ಸೂಪರ್ ಮಾರ್ಕೆಟ್ನಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಖದೀಮನು ತನ್ನ ಪ್ರಯತ್ನ ಕೈಗೂಡದೆ ಪರಾರಿಯಾಗಿರುವ ಘಟನೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 27ರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಂಜೆಯಿಂದಲೇ ಹೊಂಚು ಹಾಕಿ ರಾತ್ರಿ ಸೂಪರ್ ಮಾರ್ಕೆಟ್ ಒಂದಕ್ಕೆ ನುಗ್ಗಿದ್ದ ಖದೀಮ ಆ್ಯಕ್ಸೆಲ್ ಬ್ಲೇಡ್ ಬಳಸಿ ಕ್ಯಾಶ್ ಬಾಕ್ಸ್ ಕತ್ತರಿಸಿದ್ದಾನೆ. ಆದರೆ ಹಣ ಸಿಗದಿದ್ದಾಗ ಕೋಪದಿಂದ ಸೂಪರ್ ಮಾರ್ಕೆಟ್ನಲ್ಲಿದ್ದ ಹಲವು ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿ ಪರಾರಿ ಆಗಿದ್ದಾನೆ.
Laxmi News 24×7