Breaking News

ಬೆಳಗಾವಿಯ 22 ಶಾಲೆಗಳು ಆರಂಭ: ಡಿಡಿಪಿಐ ಬಸವರಾಜ ನಾಲತವಾಡ

Spread the love

ಚಿರತೆ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಕಳೆದ ಹಲವಾರು ದಿನಗಳಿಂದ ರಜೆ ನೀಡಲಾಗಿದ್ದ 22 ಶಾಲೆಗಳು ಸೋಮವಾರದಿಂದ ಯಥಾಪ್ರಕಾರ ಆರಂಭಗೊಳ್ಳಲಿವೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ನಾಲತವಾಡ ಅವರು ತಿಳಿಸಿದ್ದಾರೆ.

ನಗರದಲ್ಲಿ ಚಿರತೆ ಕಂಡುಬಂದ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಹಾಗೂ ಗ್ರಾಮೀಣ ವಲಯದ 22 ಶಾಲೆಗಳಿಗೆ ರಜೆ ನೀಡಲಾಗಿತ್ತು. ಇದೀಗ ಶಾಲೆಗಳನ್ನು ಪುನರ್ ಆರಂಭಿಸಲಾಗುತ್ತಿದ್ದು, ಯಥಾಪ್ರಕಾರ ಶಾಲೆಗಳು ಸೋಮವಾರದಿಂದ ಕಾರ್ಯನಿರ್ವಹಿಸಲಿವೆ.

ಪಾಲಕರು ಹಾಗೂ ಶಾಲೆಗಳು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ಡಿಡಿಪಿಐ ಬಸವರಾಜ್ ನಾಲತವಾಡ್ ಅವರು ತಿಳಿಸಿದ್ದಾರೆ.


Spread the love

About Laxminews 24x7

Check Also

ಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ

Spread the loveಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೋಡಬೇಡಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ