Breaking News

ವಿಜಯಪುರ: ಭಕ್ತರ ಭಾರ ತಾಳಲಾರದೇ ನೆಲಕ್ಕುರುಳಿದ ಗಣೇಶ ಮಂಟಪ: ಹಲವರಿಗೆ ಗಾಯ

Spread the love

ವಿಜಯಪುರ: ಗಣಪತಿ ದರ್ಶನಕ್ಕೆಂದು ಹರಿದುಬಂದ ಭಕ್ತರ ಭಾರ ತಾಳಲಾರದೇ ಸಾರ್ವಜನಿಕ ಗಣೇಶ ಮಂಟಪವೊಂದು ಕುಸಿದು ಬಿದ್ದಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಶನಿವಾರ ನಡೆದಿದೆ.

ಇಲ್ಲಿನ ವಿವೇಕಾನಂದ ವೃತ್ತದಲ್ಲಿ ಗೋಪುರ ಆಕಾರ ಹಾಗೂ ಸ್ವರ್ಣ ವರ್ಣದ ದೇವಾಲಯದ ಮಾದರಿಯಲ್ಲಿ ಈ ಗಣೇಶ ಮಂಟಪವನ್ನು ನಿರ್ಮಿಸಲಾಗಿತ್ತು.

ಇಲ್ಲಿಗೆ ಜನ ಸಾಗರವೇ ಹರಿದುಬಂದ ಪರಿಣಾಮ ಭಾರ ತಾಳದೇ ನೆಲಕ್ಕುರುಳಿದೆ. ಪರಿಣಾಮ ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಘಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ನೆಲಕ್ಕುರುಳಿದ ಮಂಟಪದಡಿ ಸಿಲುಕಿದ್ದ ಜನರನ್ನು ರಕ್ಷಸಿದ್ದಾರೆ.


Spread the love

About Laxminews 24x7

Check Also

ಸಾಲದ ಹಣಕ್ಕಾಗಿ ವ್ಯಕ್ತಿಯನ್ನ ಒತ್ತೆ ಇಟ್ಟುಕೊಂಡ ಸಾಲಗಾರ

Spread the loveವಿಜಯಪುರ, ಜೂನ್​​ 27: ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಸಾಲದ (Debt) ಹಣ (money) ವಸೂಲಿ ಮಾಡುವ ನೆಪದಲ್ಲಿ ವ್ಯಕ್ತಿಯನ್ನು ಒತ್ತೆಯಾಗಿಟ್ಟುಕೊಂಡಿರೋ ಗಂಭೀರ ಆರೋಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ